ಕುಷ್ಟಗಿ(ಕೊಪ್ಪಳ): ಜಿಲ್ಲೆ ಸದ್ಯ ಗ್ರೀನ್ ಝೋನ್ನಲ್ಲಿದ್ದು, ಲಾಕ್ಡೌನ್ ಸಡಿಲಿಕೆಯಿಂದ ಜನತೆಯಲ್ಲಿ ಕೊರೊನಾ ವೈರಸ್ ಭೀತಿ ಮಾಯವಾದಂತಿದೆ. ಈ ನಡುವೆ ಜಿಲ್ಲೆಯ ಹಲವೆಡೆ ಸಾಮಾಜಿಕ ಅಂತರ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.
ಕುಷ್ಟಗಿಯಲ್ಲಿ ಬ್ಯಾಂಕ್ ಮುಂದೆ ಜನಜಂಗುಳಿ: ಸಾಮಾಜಿಕ ಅಂತರ ಮರೆತ ಜನ - lockdown violation
ಕೊರೊನಾ ಭೀತಿ ಹಿನ್ನೆಲೆ ಪ್ರತಿಯೊಂದು ಸ್ಥಳದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಆದರೆ ಲಾಕ್ಡೌನ್ ಸಡಿಲಿಕೆಯಾದ ಬಳಿಕ ಹಲವು ಕಡೆ ಈ ನಿಯಮವನ್ನು ಉಲ್ಲಂಘಿಸುತ್ತಿರುವ ಘಟನೆ ವರದಿಯಗುತ್ತಿದೆ.

ಕುಷ್ಟಗಿಯ ಬ್ಯಾಂಕ್ ಮುಂದೆ ಜನವೋ ಜನ: ಕೇಳೋರೆ ಇಲ್ಲ ಸಾಮಾಜಿಕ ಅಂತರ
ಸರ್ಕಾರ ಸಾಮಾಜಿಕ ಅಂತರದ ಬಗ್ಗೆ ಎಷ್ಟೇ ತಿಳಿ ಹೇಳಿದರೂ ನಿಯಮ ಗಾಳಿಗೆ ತೂರಿ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಜನ ತೊಡಗಿದ್ದಾರೆ. ನಗರದ ಎಸ್ಬಿಐ ಬ್ಯಾಂಕ್ ಬಳಿ ಜನರು ಸಾಮಾಜಿಕ ಅಂತರ ಮರೆತು ನೂಕುನುಗ್ಗಲಿನಲ್ಲಿ ತಮ್ಮ ಕೆಲಸಕ್ಕೆ ಮುಗಿಬಿದ್ದ ಘಟನೆ ನಡೆದಿದೆ. ಬ್ಯಾಂಕ್ ಹೊರ ಭಾಗ ಚೌಕಾಕಾರದ ಬಾಕ್ಸ್ ನಿರ್ಮಿಸಿದ್ದರು. ಅದನ್ನೂ ಯಾರೂ ಗಣನೆಗೆ ತೆಗೆದುಕೊಂಡಂತೆ ಕಾಣಿಸಲಿಲ್ಲ.
ಜನ್ಧನ್ ಖಾತೆ, ಹಣ ಜಮಾ ಮಾಡಲು, ಉಜ್ವಲ ಯೋಜನೆ ಫಲಾನುಭವಿಗಳು ಬ್ಯಾಂಕ್ ಮುಂದೆ ಸೇರಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಿದ್ದರೂ ಬ್ಯಾಂಕ್ ಸಿಬ್ಬಂದಿ ಮಾತ್ರ ಪ್ರಶ್ನಿಸದೆ ಸುಮ್ಮನಾಗಿದ್ದರು ಎನ್ನಲಾಗಿದೆ.