ಕರ್ನಾಟಕ

karnataka

ETV Bharat / state

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಮಾಧ್ಯಮದವರ ಮೇಲೆ ಪೋಷಕರು ಗರಂ - koppala hijab issue

ಕೊಪ್ಪಳ ನಗರದ ಮೌಲಾನಾ ಅಜಾದ್ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಇಂದೂ ಸಹ ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಸುದ್ದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಪೋಷಕರೋರ್ವರು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರ ಮೇಲೆ ಪೋಷಕರು ಗರಂ
ಮಾಧ್ಯಮದವರ ಮೇಲೆ ಪೋಷಕರು ಗರಂ

By

Published : Feb 15, 2022, 11:05 AM IST

Updated : Feb 21, 2022, 2:07 PM IST

ಕೊಪ್ಪಳ: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶ, ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶವಿದ್ದರೂ ಕೊಪ್ಪಳ ನಗರದಲ್ಲಿ ವಿದ್ಯಾರ್ಥಿನಿಯರು ಇಂದೂ ಸಹ ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದಿದ್ದು ಕಂಡುಬಂತು.

ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಕೊಪ್ಪಳ ನಗರದ ಮೌಲಾನಾ ಅಜಾದ್ ಶಾಲೆಯ ಶಿಕ್ಷಕರು ವಿದ್ಯಾರ್ಥಿನಿಯರ ಹಿಜಾಬ್ ತೆಗಿಸಲಾಗಿತ್ತು. ಆದರೆ ಇಂದು ಮತ್ತೆ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡೇ ಬಂದಿದ್ದಾರೆ.

ಈ ಕುರಿತು ವರದಿಗೆ ಹೋದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ, ವಿದ್ಯಾರ್ಥಿನಿಯರನ್ನು ಬಿಡಲು ಬಂದಿದ್ದ ಪೋಷಕರೋರ್ವರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. 'ವಿಡಿಯೋ ಮಾಡಬೇಡಿ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಾಕೀತು ಮಾಡಿದರು.

ಕೊಪ್ಪಳದ ಶಾಸಕರ ಮಾದರಿ ಶಾಲೆ ಆವರಣದಲ್ಲಿ ಜಮಾಯಿಸಿದ ಪಾಲಕರು ವಿವಾದ ಮುಗಿಯುವವರೆಗೂ ಶಾಲೆಗೆ ರಜೆ ಘೊಷಣೆ ಮಾಡುವಂತೆ ಪಾಲಕರು ಆಗ್ರಹಿಸಿದರು.

ಇದನ್ನೂ ಓದಿ:'ನಾವು ಹಿಜಾಬ್ ಧರಿಸೇ ಧರಿಸುತ್ತೇವೆ..': ಗದಗದಲ್ಲಿ ಪ್ರತಿಭಟನಾ ರ‍್ಯಾಲಿ

ಮೌಲಾನಾ ಅಜಾದ್ ಶಾಲೆಯಲ್ಲಿ ಜನರ ಜಮಾವಣೆ, ಮಾಧ್ಯಮದವರಿಗೆ ವಿರೋಧ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ ಅಮರೇಶ ಬಿರಾದಾರ ಹಾಗೂ ನಗರ ಠಾಣೆ ಪಿಐ ಮಾರುತಿ ಗುಳ್ಳಾರಿ ಭೇಟಿ ನೀಡಿ ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದರು.

Last Updated : Feb 21, 2022, 2:07 PM IST

ABOUT THE AUTHOR

...view details