ಗಂಗಾವತಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಳ್ಳಬೇಕು. ಅವರ ಶಕ್ತಿ ಏನೆಂದು ಪಕ್ಷದ ಹೈಕಮಾಂಡ್ಗೆ ಗೊತ್ತಿದೆ. ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಶಿವರಾಜ ತಂಗಡಗಿಗೆ ಟಾಂಗ್ ಕೊಟ್ಟಿದ್ದಾರೆ.
ಒಮ್ಮೆ ನಿಮ್ಮ ಇತಿಹಾಸ ನೋಡಿಕೊಳ್ಳಿ: ತಂಗಡಗಿಗೆ ಬಿಜೆಪಿ ಶಾಸಕ ಟಾಂಗ್ - once check the your History
ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಶಿವರಾಜ ತಂಗಡಗಿಗೆ ಟಾಂಗ್ ನೀಡಿದ್ದಾರೆ.
ತಂತಿ ಮೇಲಿನ ನಡಿಗೆಯ ಸ್ಥಿತಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ನೋವು ಪಡುತ್ತಿದ್ದಾರೆ. ಆದ್ದರಿಂದ ಆ ನೋವು ಪಡುವ ಬದಲು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬನ್ನಿ ಎಂದು ಶಿವರಾಜ ತಂಗಡಗಿ ನೀಡಿದ್ದ ಹೇಳಿಕೆಗೆ ಪರಣ್ಣ ಮುನವಳ್ಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮದು ಶಿಸ್ತಿನ ಪಕ್ಷ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂದು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೈಕಮಾಂಡ್ಗೆ ಇದೆ. ಈ ಬಗ್ಗೆ ತಂಗಡಗಿ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಈ ಹಿಂದೆ ನೀವು ಎಲ್ಲಿದ್ದೀರಿ? ನಿಮ್ಮ ಚರಿತ್ರೆ ಏನು ಎಂಬುವುದು ಒಮ್ಮೆ ನಿಮ್ಮ ಇತಿಹಾಸ ಕೆದಕಿ ನೋಡಿಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.