ಕೊಪ್ಪಳ:ವೆಂಟಿಲೇಟರ್ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರಹಿತ ರೋಗಿಯೊಬ್ಬರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಜಿಲ್ಲಾಸ್ಪತ್ರೆಯ ಸಾರಿ ವಿಭಾಗದಲ್ಲಿ ದಾಖಲಾಗಿದ್ದ ತಾಲೂಕಿನ ಅಗಳಕೇರಾ ನಿವಾಸಿ ಹುಲಿಗೆಮ್ಮ ಎಂಬ ವೃದ್ಧೆ ವೆಂಟಿಲೇಟರ್ ಸಿಗದೆ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ವೃದ್ಧೆಯ ಮೃತದೇಹವಿಟ್ಟು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು ಎನ್ನಲಾದ ವಿಡಿಯೋ ಒಂದು ಲಭ್ಯವಾಗಿದೆ.