ಕರ್ನಾಟಕ

karnataka

By

Published : Aug 4, 2020, 9:09 PM IST

ETV Bharat / state

ಕೊಪ್ಪಳ: 1,600 ರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ...

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈವರೆಗೆ ಸೋಂಕಿತರ ಸಂಖ್ಯೆ 1600 ರ ಗಡಿ ದಾಟಿದೆ.

Koppal
ಕೊಪ್ಪಳ

ಕೊಪ್ಪಳ:ಕೊರೊನಾ ಸೋಂಕು ಹರಡುವಿಕೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಈವರೆಗೆ ಸೋಂಕಿತರ ಸಂಖ್ಯೆ 1600 ರ ಗಡಿ ದಾಟಿದೆ. ಅದರಲ್ಲೂ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಹಲವಾರು ಕಾರಣಗಳಿವೆ.

ಜಿಲ್ಲೆಯಲ್ಲಿ ಆಗಸ್ಟ್ 3 ರ ಸಂಜೆಯವರೆಗೆ ಕೊರೊನಾ ಸೋಂಕಿತರ ಸಂಖ್ಯೆ 1,602 ಪತ್ತೆಯಾಗಿದೆ. ಈ ಸಂಖ್ಯೆಯಲ್ಲಿ ಅರ್ಧದಷ್ಟು ಪ್ರಕರಣಗಳು ಅವಿಭಜಿತ ಗಂಗಾವತಿ ತಾಲೂಕಿನಲ್ಲಿ ಪತ್ತೆಯಾಗಿವೆ. ಆಗಸ್ಟ್ 3ರ ಸಂಜೆಯವರೆಗೆ ಪತ್ತೆಯಾಗಿರುವ ಒಟ್ಟು 1,602 ಪ್ರಕರಣಗಳಲ್ಲಿ ಗಂಗಾವತಿ ತಾಲೂಕಿನಲ್ಲಿ ಒಟ್ಟು 879 ಪ್ರಕರಣಗಳು ದಾಖಲಾಗಿವೆ. ಅಂದರೆ ಸೋಂಕು ಪತ್ತೆಯಾಗುತ್ತಿರುವ ಜಿಲ್ಲೆಯ ಉಳಿದ ತಾಲೂಕಿಗಿಂತ ಅವಿಭಜಿತ ಗಂಗಾವತಿ ತಾಲೂಕು ಮೊದಲ ಸ್ಥಾನದಲ್ಲಿದೆ.

ಇನ್ನುಳಿದಂತೆ 387 ಪ್ರಕರಣಗಳು ದಾಖಲಾಗಿರುವ ಕೊಪ್ಪಳ ತಾಲೂಕು ಎರಡನೇ ಸ್ಥಾನದಲ್ಲಿದೆ. 190 ಪ್ರಕರಣಗಳು ಪತ್ತೆಯಾಗಿರುವ ಕುಷ್ಟಗಿ ತಾಲೂಕು ಮೂರನೇ ಸ್ಥಾನ ಹಾಗೂ 146 ಪ್ರಕರಣಗಳು ಪತ್ತೆಯಾಗಿರುವ ಯಲಬುರ್ಗಾ ತಾಲೂಕು ನಾಲ್ಕನೇ ಸ್ಥಾನದಲ್ಲಿದೆ. ಗಂಗಾವತಿ ತಾಲೂಕಿನಲ್ಲಿ ಹೆಚ್ಚಿನ ರೀತಿಯಲ್ಲಿ ಸೋಂಕು ಹರಡಿರೋದಕ್ಕೆ ಅನೇಕ ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಗಂಗಾವತಿ ತಾಲೂಕು ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವುದು.

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,600 ರ ಗಡಿ ದಾಟಿದೆ.

ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿಯೂ ಸೋಂಕಿನ ಪ್ರಮಾಣ ಅಧಿಕವಾಗಿದೆ. ಗಂಗಾವತಿಯಿಂದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಸಂಪರ್ಕ ಜಾಸ್ತಿ. ಗಂಗಾವತಿ ತಾಲೂಕು ನೀರಾವರಿ ಪ್ರದೇಶವಾಗಿದ್ದು, ಗಂಗಾವತಿ ನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ. ಹೀಗಾಗಿ ಇಲ್ಲಿ ಅಂತಾರಾಜ್ಯಗಳ ನಂಟು ಸಹ ಇದೆ. ಅಲ್ಲದೇ ಆಂಧ್ರಪ್ರದೇಶ ಸೇರಿ ಅಂತಾರಾಜ್ಯ ಸಂಪರ್ಕ ಹೊಂದಿರುವ ಜನರು ಸಹ ಗಂಗಾವತಿ ತಾಲೂಕಿನಲ್ಲಿ ಬಹಳ ಇದ್ದಾರೆ. ವಿವಿಧ ಕಾರಣಕ್ಕಾಗಿ ಅಂತಾರಾಜ್ಯ ಪ್ರಯಾಣ ಮಾಡಿರುವವರಿಂದ ಇದು ಸಹ ಗಂಗಾವತಿ ತಾಲೂಕಿನಲ್ಲಿ ಸೋಂಕು ಹೆಚ್ಚಳವಾಗುವುದಕ್ಕೆ ಕಾರಣವಾಗಿರಬಹುದು ಎಂದು ಪತ್ರಕರ್ತ ಹುಸೇನ್ ಪಾಷಾ ಹೇಳಿದ್ದಾರೆ.

ಇದಲ್ಲದೆ ಲಾಕ್​​ಡೌನ್ ಸಡಿಲಿಕೆ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಅಂತಾರಾಜ್ಯ ವಲಸೆ ಕಾರ್ಮಿಕರು ತಾಲೂಕಿಗೆ ಮರಳಿದರು. ಇದು ಸಹ ಅಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡಲು ಕಾರಣವಾಯಿತು ಎನ್ನುವ ಮಾತುಗಳಿವೆ.

ಇನ್ನುಳಿದಂತೆ ಉಳಿದ‌ ಮೂರು ತಾಲೂಕುಗಳಲ್ಲಿ ಗಂಗಾವತಿಯಲ್ಲಿ ಪತ್ತೆಯಾಗುತ್ತಿರುವಷ್ಟು ಸೋಂಕಿತರು ಪತ್ತೆಯಾಗುತ್ತಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಗಂಗಾವತಿ ತಾಲೂಕು ಕೊರೊನಾ‌ ಹಾಟ್ ಸ್ಪಾಟ್ ಆಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರೋದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ.

ABOUT THE AUTHOR

...view details