ಗಂಗಾವತಿ: ಲಾಕ್ಡೌನ್ಗೆ ಸಿಲುಕಿ ಕಂಗಾಲಾಗಿ ಶಿವಮೊಗ್ಗದಿಂದ ಇಲ್ಲಿಗೆ ಬಂದಿದ್ದ ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ಈಗ ಮತ್ತೆ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಲಾಗಿದೆ.
ಗಂಗಾವತಿಯಲ್ಲಿ ಸಿಲುಕಿದ್ದ ಉತ್ತರ ಭಾರತದ ವಲಸೆ ಕಾರ್ಮಿಕರು ಮರಳಿ ಬೆಂಗಳೂರಿಗೆ - migrant workers return to Bangalore
ಗಂಗಾವತಿಯಲ್ಲಿ ಸಿಲುಕಿದ್ದ ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ಈಗ ಮತ್ತೆ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಲಾಗಿದೆ.
ವಲಸೆ ಕಾರ್ಮಿಕರು
27 ಜನ ಕಾರ್ಮಿಕರು ರಾಯಚೂರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ತಮ್ಮ ರಾಜ್ಯ ಹಾಗೂ ಊರಿಗೆ ತೆರಳುವ ಯೋಚನೆಯಲ್ಲಿದ್ದರು. ಆದರೆ ರಾಯಚೂರಿನಲ್ಲಿ ಇನ್ನೂ ರೈಲು ಸೇವೆ ಆರಂಭವಾಗದ ಹಿನ್ನೆಲೆ ಅಧಿಕಾರಿಗಳು ಮತ್ತೆ ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರಿನಿಂದ ಅಂತರ್ ರಾಜ್ಯಗಳ ನಡುವೆ ರೈಲು ಸೇವೆ ಆರಂಭವಾದ ಹಿನ್ನೆಲೆ ಈ ವಲಸೆ ಕಾರ್ಮಿಕರನ್ನು ಬೆಂಗಳೂರಿಗೆ ಪ್ರತ್ಯೇಕ ವಾಹನಗಳ ಮೂಲಕ ಕಳಿಸಿ ಅಲ್ಲಿಂದ ತಮ್ಮೂರಿಗೆ ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.