ಕರ್ನಾಟಕ

karnataka

ETV Bharat / state

ಕೊರೊನಾತಂಕ: ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಬರಲು ಜನರ ಹಿಂದೇಟು

ಆಸ್ಪತ್ರೆಯ ಎರಡು ವಾರ್ಡು​ಗಳಲ್ಲಿ ಕೊರೊನಾ ಪಾಸಿಟಿವ್ ಕೇಸುಗಳಿರುವ ಕಾರಣ ಉಪ ವಿಭಾಗ ಆಸ್ಪತ್ರೆಗೆ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಬರುವವರ ಸಂಖ್ಯೆ ಕಡಿಮೆಯಾಗಿದೆ.

hospital
hospital

By

Published : Jun 12, 2020, 1:29 PM IST

ಗಂಗಾವತಿ:ನಗರದಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ರೋಗಿಗಳು ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವಾರ್ಡುಗಳಲ್ಲಿ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ, ಆಸ್ಪತ್ರೆಗೆ ಸಾಮಾನ್ಯ ಕಾಯಿಲೆಗೆ ಟ್ರೀಟ್‌ಮೆಂಟ್‌ ಪಡೆಯಲು ಬರುವವರ ಸಂಖ್ಯೆ ದಿಢೀರ್ ಕುಸಿತವಾಗಿದೆ.

ಕೊರೊನಾ ಭೀತಿಯಿಂದಾಗಿ ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಈ ಹಿಂದೆ ಇಡೀ ಆಸ್ಪತ್ರೆ ಆವರಣ ಜಾಗವಿಲ್ಲದೆ ತುಂಬಿರುತಿತ್ತು. ಆದರೀಗ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಕೈಕಾಲು ನೋವು, ಮೈಕೈ ನೋವು, ತಲೆನೋವಿನಂತಹ ಸಾಮಾನ್ಯ ಕಾಯಿಲೆಗಳಿಗೆ ಬರುವ ರೋಗಿಗಳ ಸಂಖ್ಯೆ ಈ ಹಿಂದೆ ಹೆಚ್ಚಿತ್ತು.

ಆದರೀಗ ಹೊರ ಜಿಲ್ಲೆಗಳಿಂದ ಬರುವ ಜನರು ಮತ್ತು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಈ ಸರ್ಕಾರಿ ಆಸ್ಪತ್ರೆಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ವೈದ್ಯರು ಕೂಡ ಕೊಂಚ ನಿರಾಳರಾಗಿದ್ದಾರೆ.

ABOUT THE AUTHOR

...view details