ಗಂಗಾವತಿ :ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ನಿವಾರ್ ಚಂಡಮಾರುತ ಪರಿಣಾಮ ಕೊಪ್ಪಳ ಜಿಲ್ಲೆಯ ಮೇಲೂ ಬೀರಲಿದ್ದು, ರೈತರು ಕೃಷಿ ಚಟುವಟಿಕೆಯಿಂದ ಕೆಲಕಾಲ ದೂರ ಇರುವಂತೆ ವಿಜ್ಞಾನಿಗಳು ಸೂಚಿಸಿದ್ದಾರೆ.
ನಿವಾರ್ ಚಂಡಮಾರುತ.. ಅಲರ್ಟ್ ಇರುವಂತೆ ರೈತರಿಗೆ ವಿಜ್ಞಾನಿಗಳ ಕರೆ
ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಒಂದು ವಾರ ಕಾಲ ಮೋಡಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇರಲಿದೆ..
ನಿವಾರ್ ಚಂಡಮಾರುತ
ಇಲ್ಲಿನ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ವಿಜ್ಞಾನಿ ಫಕೀರಪ್ಪ ಹಾಗೂ ಕೇಂದ್ರದ ಮುಖ್ಯಸ್ಥ ರವಿ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದು, ನಿವಾರ್ ಚಂಡ ಮಾರುತ ಪುದುಚೇರಿ ಹಾಗೂ ತಮಿಳುನಾಡು ತೀರಗಳ ಮೂಲಕ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಒಂದು ವಾರ ಕಾಲ ಮೋಡಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇರಲಿದೆ. ಹೀಗಾಗಿ, ರೈತರು ಕೃಷಿ ಚಟುವಟಿಕೆ ಕೈಗೊಳ್ಳುವುದನ್ನು ಮುಂದೂಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.