ಕರ್ನಾಟಕ

karnataka

ETV Bharat / state

ಕೊಪ್ಪಳ: ಜನಾರ್ದನ ರೆಡ್ಡಿ ವಾಸ್ತವ್ಯಕ್ಕೆ ಸಿದ್ಧವಾಯ್ತು ಭವ್ಯ ಬಂಗಲೆ! - ಈಟಿವಿ ಭಾರತ ಕನ್ನಡ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ತಾತ್ಕಾಲಿಕ ವಾಸ್ತವ್ಯಕ್ಕೆ ಕೊಪ್ಪಳದ ಗಂಗಾವತಿಯಲ್ಲಿ ಭವ್ಯ ಬಂಗಲೆ ಸಿದ್ಧವಾಗಿದೆ.

new-house-for-janardhan-reddy-in-gangavathi
ಕೊಪ್ಪಳ : ರೆಡ್ಡಿ ವಾಸ್ತವ್ಯಕ್ಕೆ ಸಿದ್ಧವಾಯ್ತು ಭವ್ಯ ಬಂಗಲೆ

By

Published : Dec 5, 2022, 7:33 PM IST

ಗಂಗಾವತಿ/ ಕೊಪ್ಪಳ: ಮಾಜಿ ಸಚಿವ, ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ ಅವರ ತಾತ್ಕಾಲಿಕ ವಾಸ್ತವ್ಯಕ್ಕೆ ಗಂಗಾವತಿಯಲ್ಲಿ ಭವ್ಯ ಬಂಗಲೆ ಸಿದ್ಧವಾಗಿದೆ. ಕನಕಗಿರಿ ರಸ್ತೆಯಲ್ಲಿ ಈ ಭವ್ಯ ಬಂಗಲೆ ನಿರ್ಮಾಣವಾಗಿದ್ದು, ರೆಡ್ಡಿ ಅವರ ಅಧಿಕೃತ ಭೇಟಿಯೊಂದೇ ಬಾಕಿ ಇದೆ.

ಇಲ್ಲಿನ ಕನಕಗಿರಿ ರಸ್ತೆಯ ರೈಲ್ವೆ ಮೇಲ್ಸೆತುವೆ ದಾಟಿದ ಬಳಿಕ ಇರುವ ಹೊಸ ಲೇಔಟ್​​ನಲ್ಲಿ ಉದ್ಯಮಿ ವಿನೋದ್ ಸುರಾನಾ ಎಂಬುವವರಿಗೆ ಸೇರಿದ ಹೊಸ ಬಂಗಲೆಯೊಂದನ್ನು ರೆಡ್ಡಿ ಆಪ್ತರು ಜನಾರ್ದನ ರೆಡ್ಡಿ ಅವರಿಗಾಗಿ ಹುಡುಕಿ ಇಟ್ಟಿದ್ದಾರೆ.

ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಿರುವ ಜನಾರ್ದನ ರೆಡ್ಡಿ, ಇಡೀ ದಿನ ಹನುಮ ಮಾಲೆ ನಿಮಿತ್ತ ನಗರದಲ್ಲಿ ನಡೆದ ಸಂಕೀರ್ತನಾ ಯಾತ್ರೆ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ, ಪಂಪಾಸರೋವರ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೋಮವಾರ ರಾತ್ರಿ ಪಂಪಾ ಸರೋವರಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ತಮ್ಮ ಉದ್ದೇಶಿತ ತಾತ್ಕಾಲಿಕ ನಿವಾಸಕ್ಕೆ ಭೇಟಿ ನೀಡಲಿದ್ದು, ಬಳಿಕವಷ್ಟೇ ಅಲ್ಲಿ ವಾಸ ಮಾಡುವುದರ ಬಗ್ಗೆ ಅಂತಿಮ ನಿರ್ಧಾರ ತಾಳುತ್ತಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಜನಾರ್ದನ ರೆಡ್ಡಿ ಅವರು ಯಾವತ್ತಿದ್ದರೂ ಬಿಜೆಪಿ ಪರವಾಗಿ ಇರುತ್ತಾರೆ: ಸಾರಿಗೆ ಸಚಿವ ಬಿ ಶ್ರೀರಾಮುಲು

ABOUT THE AUTHOR

...view details