ಕರ್ನಾಟಕ

karnataka

ETV Bharat / state

ಲೋಕ ಅದಾಲತ್​ನಲ್ಲಿ 2.51 ಕೋಟಿ ರೂಪಾಯಿ ಮೊತ್ತದ ಪ್ರಕರಣಗಳಿಗೆ ರಾಜಿ ಸಂಧಾನ

ಅಂತ್ಯಕಾಣದ ವಿವಿಧ ನಮೂನೆಯ 179 ವ್ಯಾಜ್ಯ ಪ್ರಕರಣಗಳಿಗೆ ಇಲ್ಲಿನ ಲೋಕ ಅದಾಲತ್​ನಲ್ಲಿ ದೂರುದಾರರು ಮತ್ತು ಕಕ್ಷಿದಾರರ ಮಧ್ಯೆ ನ್ಯಾಯಾಧೀಶರು ರಾಜಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು.

ರಾಜೀ ಸಂಧಾನ

By

Published : Sep 15, 2019, 8:22 AM IST

ಗಂಗಾವತಿ: ಹಲವು ವರ್ಷಗಳಿಂದ ಅಂತ್ಯಕಾಣದ ವಿವಿಧ ನಮೂನೆಯ 179 ವ್ಯಾಜ್ಯ ಪ್ರಕರಣಗಳಿಗೆ ಇಲ್ಲಿನ ಲೋಕ ಅದಾಲತ್​ನಲ್ಲಿ ದೂರುದಾರರು ಮತ್ತು ಕಕ್ಷಿದಾರರ ಮಧ್ಯೆ ನ್ಯಾಯಾಧೀಶರು ರಾಜಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು.

2.51 ಕೋಟಿ ರೂಪಾಯಿ ಮೊತ್ತದ ಪ್ರಕರಣಗಳಿಗೆ ರಾಜಿ

ಈ ಮೂಲಕ ಒಟ್ಟು 2.51 ಕೋಟಿ ರೂಪಾಯಿ ಮೊತ್ತದ ಪ್ರಕರಣಗಳಿಗೆ ರಾಜಿ ಮಾಡಿಸಲಾಯಿತು. ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದ ಬಳಿಕವೂ ರೈತರಿಗೆ ನೋಟಿಸ್ ನೀಡಿದ್ದ ಇಲ್ಲಿನ ಮೂರು ಬ್ಯಾಂಕಿನ 13 ಪ್ರಕರಣ ಇದರಲ್ಲಿದ್ದವು.

ಚೆಕ್​ಬೌನ್ಸ್, ಮೋಟಾರು ವಾಹನ ಕಾಯ್ದೆ, ತಾಂತ್ರಿಕ ದೋಷದಂತ ಒಟ್ಟು 17ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂಧಾನ ಏರ್ಪಡಿಸಲಾಯಿತು. ನ್ಯಾಯಾಧೀಶರಾದ ಜಿ.ಅನಿತಾ, ಆರ್.ಎಂ.ನದಾಫ್, ಹೆಚ್.ಡಿ.ಗಾಯಿತ್ರಿ ಅದಾಲತ್​ನಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details