ಕರ್ನಾಟಕ

karnataka

ETV Bharat / state

ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಟೆಂಡರ್​​ ಆಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಟೆಂಡರ್​​​ ಆದ್ದರೂ ಕೊರೊನಾ ನೆಪ ಹೇಳಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ನೀರಿನ ಘಟಕ
ನೀರಿನ ಘಟಕ

By

Published : May 26, 2020, 12:13 PM IST

ಕುಷ್ಟಗಿ(ಕೊಪ್ಪಳ): ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಟೆಂಡರ್​​​ ಆಗಿದ್ದರೂ ಕೊರೊನಾ ನೆಪ ಹೇಳಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿನ ಮಾರುತಿ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಕ್ಯಾಬಿನ್ ಅಳವಡಿಸಲಾಗಿದ್ದರೂ ಯಂತ್ರ ಅಳವಡಿಸಲು ವಿಳಂಬಕ್ಕೆ ಕೊರೊನಾ ಲಾಕ್​ಡೌನ್ ನೆಪ ತೋರಲಾಗುತ್ತಿದೆ. ಈ ಕುರಿತು ಪುರಸಭೆ ಸದಸ್ಯೆ ಗೀತಾ ಕೋಳೂರು ಅವರನ್ನು ವಿಚಾರಿಸಿದರೆ, ಶುದ್ಧ ನೀರಿನ ಘಟಕದ ಕ್ಯಾಬಿನ್ ಒಬ್ಬರಿಗೆ ಟೆಂಡರ್ ಆಗಿದ್ದು, ಇನ್ನೊಬ್ಬರಿಗೆ ನೀರು ಶುದ್ಧೀಕರಿಸುವ ಯಂತ್ರಗಳ ಟೆಂಡರ್ ಆಗಿದೆ. ಈ ವಿಳಂಬದ ಬಗ್ಗೆ ಸಂಬಂಧಿಸಿದವರನ್ನು ವಿಚಾರಿಸುವುದಾಗಿ ಹೇಳಿದ್ದಾರೆ.

ಸದ್ಯ ನೀರಿಗಾಗಿ ಹಾಹಾಕಾರ ಪಡುವ ಪರಿಸ್ಥಿತಿ ಇದೆ. ಆದರೂ ಶುದ್ಧ ನೀರಿನ ಘಟಕ ಅಳವಡಿಸಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details