ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ನಗರಸಭಾ ಸದಸ್ಯನ‌ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Congress man Kidnap

ಗಂಗಾವತಿಯಲ್ಲಿ ಗುರುವಾರ ಮಧ್ಯರಾತ್ರಿ ಕಾಂಗ್ರೆಸ್​​ನ ಹಿರಿಯ ಸದಸ್ಯರೊಬ್ಬರನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಏಳು ಜನರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

municipal-councilor-abducted-footage-captured-on-cctv
ನಗರಸಭಾ ಸದಸ್ಯನ‌ ಅಪಹರಣ: ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

By

Published : Oct 30, 2020, 7:38 AM IST

ಗಂಗಾವತಿ:ನಗರಸಭೆಯನ್ನು ವಶಪಡಿಸಿಕೊಳ್ಳುವ ಉದ್ದೇಶಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಕಸರತ್ತು, ಲಾಬಿಗಳು ಮುಂದುವರೆದಿದ್ದು, ಗುರುವಾರ ಮಧ್ಯರಾತ್ರಿ ಕಾಂಗ್ರೆಸ್​​​ನ ಹಿರಿಯ ಸದಸ್ಯರೊಬ್ಬರನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಏಳು ಜನರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ನಗರಸಭಾ ಸದಸ್ಯನ‌ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ‌ಮುದೇನೂರು ಎಂಬುವವರನ್ನು ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಸುರೇಶ್ ಗೌರಪ್ಪ, ನಗರಸಭೆಯ ಮೂರು ಸದಸ್ಯರು ಸೇರಿದಂತೆ ಒಟ್ಟು ಏಳು ಜನರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಫ್​ಐಆರ್​ ದಾಖಲು

ನಗರಸಭಾ ಸದಸ್ಯರಾದ ಅಜೇಯ್ ಬಿಚ್ಚಾಲಿ, ನವೀನ್ ಕುಮಾರ ಮಾಲಿ ಪಾಟೀಲ್, ಪರಶುರಾಮ‌ ಚೌಡ್ಕಿ, ಮಾಜಿ ಅಧ್ಯಕ್ಷ ರಾಘವೆಂದ್ರ ಶೆಟ್ಟಿ, ಮಾಜಿ ಸದಸ್ಯ ರಾಚಪ್ಪ ಸಿದ್ದಾಪುರ ಹಾಗೂ ಇತರರು ಕೊಪ್ಪಳ‌ ರಸ್ತೆಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಸ್ನೇಹಿತರೊಂದಿಗೆ ಊಟಕ್ಕೆ ಕುಳಿತಿದ್ದ ಮನೋಹರಸ್ವಾಮಿಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ವ್ಯಕ್ತಿಯನ್ನು ಕೆಲ ಯುವಕರು ಒತ್ತಾಯಪೂರ್ವಕವಾಗಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details