ಕೊಪ್ಪಳ:ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಎನ್ಎಂ ಕೇಂದ್ರದಲ್ಲಿರುವ ಲಸಿಕಾ ಕೇಂದ್ರಕ್ಕೆ ಪತ್ನಿ ನಿಂಗಮ್ಮ ಅವರೊಂದಿಗೆ ಆಗಮಿಸಿದ ಸಂಸದ ಸಂಗಣ್ಣ ಕರಡಿ ಕೊರೊನಾ ಲಸಿಕೆ ಪಡೆದರು.
ಕೊರೊನಾ ಲಸಿಕೆ ಹಾಕಿಸಿಕೊಂಡ ಸಂಸದ ಸಂಗಣ್ಣ ಕರಡಿ ದಂಪತಿ
71 ವರ್ಷದ ಸಂಗಣ್ಣ ಕರಡಿ ಹಾಗೂ 66 ವರ್ಷದ ನಿಂಗಮ್ಮ ದಂಪತಿ ಜಿಲ್ಲಾಸ್ಪತ್ರೆಗೆ ಬಂದು ಲಸಿಕೆ ಪಡೆದರು.
ಕೊರೊನಾ ಲಿಸಿಕೆ ಹಾಕಿಸಿಕೊಂಡ ಸಂಸದ ಸಂಗಣ್ಣ ಕರಡಿ ದಂಪತಿ
ಸಂಗಣ್ಣ ಕರಡಿ(71) ಹಾಗೂ ನಿಂಗಮ್ಮ(66) ಅವರು ಲಸಿಕೆ ಪಡೆಯಲು ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಲಸಿಕಾ ಕೇಂದ್ರಕ್ಕೆ ಆಗಮಿಸಿದ ದಂಪತಿಯ ದಾಖಲಾತಿಯನ್ನು ಪರಿಶೀಲಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ನಂತರ ಲಸಿಕೆ ನೀಡಿದರು.
ಇದನ್ನೂ ಓದಿ:ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ: ಸಚಿವ ಸೋಮಣ್ಣ ಮನವಿ