ಕುಷ್ಟಗಿ: ತಾಲೂಕಿನ ನಿರ್ಗತಿಕರಿಗೆ ಹಾಗೂ ಪಡಿತರ ರಹಿತರಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, 1ವಾರಕ್ಕೆ ಆಗುವಷ್ಟು 1,200 ದಿನಸಿ ಅಹಾರ ಪದಾರ್ಥಗಳ ಕಿಟ್ನ್ನು ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಿದರು.
1,200 ದಿನಸಿ ಪದಾರ್ಥಗಳ ಕಿಟ್ ವಿತರಿಸಿದ ಶಾಸಕ ಅಮರೇಗೌಡ ಬಯ್ಯಾಪುರ - ದಿನಸಿ ಪದಾರ್ಥಗಳ ಕಿಟ್ ವಿತರಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು 1,200 ದಿನಸಿ ಅಹಾರ ಪದಾರ್ಥಗಳ ಕಿಟ್ನ್ನು ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೇವೆ ಅಲ್ಪ ಸೇವೆಯಾಗಿದೆ. ಮುಂದೆ ಅಗತ್ಯವಾದರೆ ಇನ್ನಷ್ಟು ಕಿಟ್ಗಳನ್ನು ವಿತರಿಸುವುದಾಗಿ ತಿಳಿಸಿದರು. ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ನಿರ್ಗತಿಕರು, ಕಾರ್ಡ ರಹಿತರಿಗೆ ಇದನ್ನು ನೀಡಲಾಗುತ್ತಿದೆ. ಈಗಾಗಲೇ ಅಹಾರ ಇಲಾಖೆಯಿಂದ 2 ತಿಂಗಳ ಪಡಿತರ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. 3ನೇ ತಿಂಗಳಿನ ಪಡಿತರವನ್ನು ಮೇ.1ರಿಂದ ಮೇ. 5ರವರೆಗೆ ಅಕ್ಕಿ ಬೇಳೆ ವಿತರಿಸಲು ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಇನ್ನು ಲಾಕಡೌನ್ನಿಂದಾಗಿ ಬಡವರು, ನಿರ್ಗತಿಕರು, ಕಾರ್ಡ ರಹಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸ್ಥಿತಿವಂತ ದಾನಿಗಳು ಇವರ ನೆರವಿಗೆ ಬರಬೇಕೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮನವಿ ಮಾಡಿದರು.