ಕುಷ್ಟಗಿ(ಕೊಪ್ಪಳ): ತಾಲೂಕಿನ ಪುರ ಗ್ರಾಮದ ಕಂಟೇನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಅಮರೇಗೌಡ ಬಯ್ಯಾಪುರ ಅಲ್ಲಿನ ಜನರಲ್ಲಿ ಮನೋಸ್ಥೈರ್ಯ ಮೂಡಿಸಿದರು.
ಆತಂಕ ಬೇಡ, ಎಚ್ಚರಿಕೆ ಇರಲಿ.. ಜನರಿಗೆ ಶಾಸಕರಿಂದ ಅಭಯ - ಜನರಲ್ಲಿ ಮನೋಸ್ಥೈರ್ಯ
ಕೊರೊನಾ ವೈರಸ್ ಹೋಗಲು ಇನ್ನೂ 6 ತಿಂಗಳು ಇಲ್ಲ ವರ್ಷವಾಗಲೂಬಹುದು. ಹೀಗಾಗಿ ಎಚ್ಚರ ತಪ್ಪಬಾರದು..
ಬಯ್ಯಾಪುರ ಅಭಯ
ಯಾವುದೇ ಕಾರಣಕ್ಕೂ ಆತಂಕಿತರಾಗದಿರಿ. ಎಚ್ಚರಿಕೆಯಿಂದ ವೈದ್ಯರ ಸಲಹೆ ಪಾಲಿಸಿ ಕೊರೊನಾ ಗೆಲ್ಲಬೇಕು. ಕೊರೊನಾ ವೈರಸ್ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಗುಂಪಾಗಿರುವುದು, ಮಾಸ್ಕ್ ಧರಿಸದೇ ಹೊರಗೆ ಬರುವುದು ಮಾಡಬೇಡಿ. ಪದೇಪದೆ ಸೋಪಿನಿಂದ ಕೈತೊಳೆಯುವುದು ಮರೆಯಬೇಡಿ. ಕೊರೊನಾ ವೈರಸ್ ಹೋಗಲು ಇನ್ನೂ 6 ತಿಂಗಳು ಇಲ್ಲ ವರ್ಷವಾಗಲೂಬಹುದು. ಹೀಗಾಗಿ ಎಚ್ಚರ ತಪ್ಪಬಾರದು ಎಂದರು.