ಕರ್ನಾಟಕ

karnataka

ETV Bharat / state

ಕೊಪ್ಪಳ: ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್​ಗೆ ಬೆಂಕಿ ಹಚ್ಚಿದರು! - ಕೊಪ್ಪಳ ಅಗ್ನಿ ಅವಘಡ

ತಡರಾತ್ರಿ ಆಗಮಿಸಿದ ಅಪರಿಚಿತರಿಗೆ ಹೋಟೆಲ್‌ ಸಿಬ್ಬಂದಿ ಊಟ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಕಿರಾತಕರು ಹೋಟೆಲ್‌ಗೆ​ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

fire on hotel
ಹೊತ್ತಿ ಉರಿದ ಹೋಟೆಲ್

By

Published : May 26, 2022, 9:23 AM IST

Updated : May 26, 2022, 9:29 AM IST

ಗಂಗಾವತಿ(ಕೊಪ್ಪಳ): ರಾತ್ರಿ ಹನ್ನೊಂದುವರೆ ಗಂಟೆಯ ಬಳಿಕ ಊಟ ಇಲ್ಲ ಎಂದು ಹೇಳಿದ್ದಕ್ಕೆ ಕುಪಿತಗೊಂಡಿರುವ ಅಪರಿಚಿತರು ಹೋಟೆಲ್​ಗೆ ಬೆಂಕಿ ಹಚ್ಚಿದ ಘಟನೆ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ.


ಊಟ ನಿರಾಕರಿಸಿದ್ದರಿಂದ ಅಸಮಧಾನಗೊಂಡ ಕಿಡಿಗೇಡಿ ಯುವಕರು ಅಡುಗೆ ಸಿಬ್ಬಂದಿಗೆ ಗೊತ್ತಾಗದಂತೆ ಕೋಣೆಯ ಹೊರಗಿನಿಂದ ಚಿಲಕ ಹಾಕಿ ಕೂಡಿಹಾಕಿದ್ದಾರೆ. ಬಳಿಕ ಹೋಟೆಲ್​ಗಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದಾರೆ. ಗುಡಿಸಲು ಮಾದರಿಯಲ್ಲಿದ್ದ ಮಂಗಳೂರು ಹೆಂಚಿನ ಹೊದಿಕೆಯ ಒಟ್ಟು 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ.

ಇದನ್ನೂ ಓದಿ:ಮೊಬೈಲ್​ ಕದ್ದ ಆರೋಪ, ಯುವಕನ ಲಾರಿಗೆ ಕಟ್ಟಿಹಾಕಿ ಚಿತ್ರಹಿಂಸೆ!

ಅಡುಗೆ ಕೋಣೆಯಲ್ಲಿ ಬಂಧಿಗಳಾಗಿದ್ದ ಸಿಬ್ಬಂದಿ ಫೋನ್ ಮೂಲಕ ಆನೆಗೊಂದಿ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡು ಬಂಧನದಿಂದ ಹೊರಬಂದಿದ್ದಾರೆ. ಬೆಂಕಿ ನಂದಿಸುವ ಹೊತ್ತಿಗಾಗಲೇ ಹೊಟೇಲ್​​ನ ಸಂಪೂರ್ಣ ಭಾಗ ಸುಟ್ಟು ಕರಕಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.

Last Updated : May 26, 2022, 9:29 AM IST

ABOUT THE AUTHOR

...view details