ಕುಷ್ಟಗಿ:ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದ್ದು, ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕಳೆಗುಂದಿದೆ.
ಮುಂಗಾರು ಹಂಗಾಮಿನ ಬಿತ್ತನೆ ಕೆಲಸ ಮುಗಿದು, ರೈತಾಪಿ ವರ್ಗ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಹೆಚ್ಚುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಸರಿಯಾಗಿ ಬೀಳುತ್ತಿಲ್ಲ. ಬಿತ್ತನೆ ಸಂದರ್ಭದಲ್ಲಿ ಈ ಹಬ್ಬ ಬಂದಿದೆ.
ಕೆಲವೆಡೆ ಮಳೆಯಾಗಿ ಉತ್ತಮ ಬೆಳೆ ಇದ್ದರೂ, ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಆದರೂ ರೈತಾಪಿ ವರ್ಗ ಸಂಪ್ರದಾಯವನ್ನು ಬಿಡಲು ತಯಾರಿಲ್ಲ. ಕಷ್ಟವೆನಿಸಿದರೂ ಕೆಲವೆಡೆ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ನಡೆಯುತ್ತಿದೆ.