ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತ ಪ್ಯಾರಾ ಒಲಂಪಿಕ್ ಕ್ರೀಡಾಪಟು ಡಾ. ಮಾನಸ ಹೊಳ್ಳ ಚಾಲನೆ ನೀಡಿದರು.
ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಡಾ.ಮಾನಸ ಹೊಳ್ಳ ಚಾಲನೆ - ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಡಾ. ಮಾನಸ ಹೊಳ್ಳ ಚಾಲನೆ
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಡಾ. ಮಾನಸ ಹೊಳ್ಳ ಚಾಲನೆ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಜೀವನದಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಚಾಲನೆ ನೀಡಿರುವುದಕ್ಕೆ ನನ್ನ ಜನ್ಮ ಸಾರ್ಥವಾಯಿತು ಎಂದು ಅವರು ಭಾವುಕರಾದರು.
ನಾನು ಪ್ರತಿ ವರ್ಷ ಈ ಜಾತ್ರೆಯ ಬಗ್ಗೆ ಕೇಳುತ್ತಿದ್ದೇನೆ. ಆದರೆ, ಈ ವರ್ಷ ನನಗೆ ಜಾತ್ರೆಗೆ ಚಾಲನೆ ನೀಡುವ ಅವಕಾಶ ಬಂದಿದ್ದು ಇದು ನನ್ನ ಪೂರ್ವಜನ್ಮದ ಸುಕೃತಫಲ. ಇಂತಹ ಅವಕಾಶಗಳು ಬರಬೇಕು ಅಂದ್ರೆ, ಏಳೇಳು ಜನ್ಮದ ಪುಣ್ಯ ಎಂದು ಹೇಳ್ತಾರೆ. ಇದು ಹತ್ತು ಜನ್ಮದ ಪುಣ್ಯ. ನಾವು ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು. ನಾವು ಮಾಡಿದ ಕೆಲಸದಿಂದ ಸತ್ತ ಮೇಲೂ ಬದುಕಬಹುದು. ಇಂದಿನ ಗಳಿಗೆ ನನ್ನ ಜೀವನದಲ್ಲಿ ಮರೆಯಲಾಗದ ಘಳಿಗೆ ಎಂದರು.