ಗಂಗಾವತಿ:ಕಳೆದ ಎರಡು ವರ್ಷಗಳಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ಒತ್ತಾಯಿಸಿ 18ನೇ ವಾರ್ಡ್ನ ನಿವಾಸಿ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ನಗರಸಭೆಯ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅನಧಿಕೃತ ಕಟ್ಟಡ ತೆರವಿಗೆ ಆಗ್ರಹ: ವ್ಯಕ್ತಿಯ ಹೋರಾಟಕ್ಕೆ ಸ್ಪಂದಿಸಿಲ್ವಾ ಅಧಿಕಾರಿಗಳು?
ಕಳೆದ ಎರಡು ವರ್ಷಗಳಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ಗಂಗಾವತಿಯ 18ನೇ ವಾರ್ಡ್ನ ನಿವಾಸಿ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಗರದ ಕನಕದಾಸ ವೃತ್ತದಿಂದ ಜುಲಾಯಿನಗರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆಯ ಎರಡು ಬದಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಅಂಗಡಿಗಳನ್ನು ಆರಂಭಿಸಲಾಗಿದೆ. ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೇ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದಾರೆ ಎಂದು ದೂರುದಾರ ಹುಸೇನಪ್ಪ ಆರೋಪಿಸಿದ್ದಾರೆ.
ಖಾಸಗಿ ವ್ಯಕ್ತಿಗಳು ಮಾಸಿಕ ಲಕ್ಷಾಂತರ ರೂಪಾಯಿ ಮೊತ್ತದ ತೆರಿಗೆ ವಂಚಿಸುತ್ತಿದ್ದಾರೆ. ಈ ಅಕ್ರಮ ಕಟ್ಟಡಗಳನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಬಾಡಿಗೆ ವಸೂಲಿ ಮಾಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ಹುಸೇನಪ್ಪ ದೂರಿದ್ದಾರೆ.