ಕುಷ್ಟಗಿ(ಕೊಪ್ಪಳ): ತವರಿಗೆ ಹೋಗಿದ್ದ ಪತ್ನಿ ಹಿಂತಿರುಗಿ ಮನೆಗೆ ಬಾರದ ಹಿನ್ನೆಲೆ ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ.
ತವರು ಮನೆಯಿಂದ ಪತ್ನಿ ಬಾರದಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ - kustagi News 2020
ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ಪ್ರಶಾಂತ ಸಂಗಪ್ಪ ಮಡಿವಾಳ ಎಂಬಾತ ಪತ್ನಿ ತವರು ಮನೆಯಿಂದ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾನೆ.
ತವರುಮನೆಯಿಂದ ಪತ್ನಿ ಬಾರದಿದ್ದಕ್ಕೆ ಪತಿ ಆತ್ಮಹತ್ಯೆ
ಪ್ರಶಾಂತ ಸಂಗಪ್ಪ ಮಡಿವಾಳ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾಲೂಕಿನ ಟಕ್ಕಳಕಿ ಗ್ರಾಮದವನಾಗಿದ್ದು, ಕುಷ್ಟಗಿ 3ನೇ ವಾರ್ಡ್ನಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದ. ಪತ್ನಿಯೊಂದಿಗೆ ಪ್ರಶಾಂತ ಜಗಳವಾಡಿದ ಹಿನ್ನೆಲೆ ಪತ್ನಿ ತವರು ಮನೆ ಸೇರಿದ್ದಳು. ಹಿರಿಯರು ಬುದ್ದಿವಾದ ಹೇಳಿದರೂ ಪತಿ ಮನೆಗೆ ಬರಲು ಆಕೆ ನಿರಾಕರಿಸಿದ್ದಳು.
ಇದರಿಂದ ಮನನೊಂದ ಪತಿ ಪ್ರಶಾಂತ ಶನಿವಾರ ಬೆಳಗ್ಗೆ ಲಾಂಡ್ರಿ ಅಂಗಡಿಯ ಫ್ಯಾನ್ಗೆ ನೇಣಿಗೆ ಶರಣನಾಗಿದ್ದಾನೆ. ಕುಷ್ಟಗಿ ಪಿಎಸ್ಐ ಚಿತ್ತರಂಜನ್ ನಾಯಕ್ ಭೇಟಿ ನೀಡಿ ಪರಿಶೀಲಿದ್ದು,ಈಗಾಗಲೇ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.