ಗಂಗಾವತಿ:ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಲಾಕ್ಡೌನ್ ಆದೇಶವಿದ್ದರೂ ನಗರದಲ್ಲಿ ಯುವಕರು ಕ್ರಿಕೆಟ್ ಆಡುವ ಮೂಲಕ ಪರಿಸ್ಥಿತಿಯನ್ನು ಅಲಕ್ಷಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಲಾಕ್ ಡೌನ್ಗೆ ಡೋಂಟ್ ಕೇರ್... ಕ್ರಿಕೆಟ್ನಲ್ಲಿ ಬ್ಯುಸಿಯಾದ ಗಲ್ಲಿ ಬಾಯ್ಸ್ - lock down order; youth playing cricket
ಕೊರೊನಾ ಭೀತಿಯಿಂದಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶವಿದ್ದರೂ ನಗರದಲ್ಲಿ ಯುವಕರು ಕ್ರಿಕೆಟ್ ಆಡುವ ಮೂಲಕ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಸಿದ್ದಾರೆ.
ಕೆಟ್ನಲ್ಲಿ ಯುವಕರು ತಲ್ಲೀನ
ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಹಾಬಲೇಶ್ವರ ಲೇಔಟ್ ಪಕ್ಕದ ಗದ್ದಿಗೆಪ್ಪ ಬಡಾವಣೆಯಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಬಡಾವಣೆ ಪಕ್ಕದಲ್ಲೇ ಇರುವ ಕೊಳಗೇರಿ ಪ್ರದೇಶದ ಯುವಕರು ಆಟವಾಡುತ್ತಿದ್ದರು. ಮತ್ತಷ್ಟು ಯುವಕರು ಮರದ ನೆರಳಲ್ಲಿ ಕುಳಿತು ಬೆಟ್ಟಿಂಗ್ ಕಟ್ಟುತ್ತಿರುವುದು ಕಂಡು ಬಂತು.