ಕರ್ನಾಟಕ

karnataka

ETV Bharat / state

ಮೊಬೈಲ್​ ಕಾಲ್​ನಲ್ಲಿ ಸಿಡಿಪಿಓ ಹೆಸರಲಿ ಮೇಲ್ವಿಚಾರಕಿ ಸಂಭಾಷಣೆ: ನೈಜ ಅಧಿಕಾರಿ ತಬ್ಬಿಬ್ಬು

ಸರಸ್ವತಿ ಅವರು ತಾವೇ ಸಿಡಿಪಿಓ ಎಂದು ಮೊಬೈಲ್​​ನಲ್ಲಿ ಮಾತನಾಡಿದ್ದ ರೆಕಾರ್ಡಿಂಗ್ ಅನ್ನು ಸಾರ್ವಜನಿಕರ ಮದ್ಯೆ ಕೇಳಿಸಿದಾಗ, ಸಿಡಿಪಿಓ ಜಯಶ್ರೀ ಅವರಿಗೆ ಏನೂ ಹೇಳಬೇಕೆನ್ನುವುದು ತಿಳಿಯದೆ ಮುಜುಗುರಕ್ಕೆ ಒಳಗಾದರು.

kustagi-citizens-confused-to-know-whos-real-cdpo
ಸಿಡಿಪಿಓ ಗೊಂದಲ

By

Published : Jul 5, 2020, 12:58 AM IST

ಕುಷ್ಟಗಿ(ಕೊಪ್ಪಳ):ಕುಷ್ಟಗಿ(ಕೊಪ್ಪಳ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯೊಬ್ಬರು ತಾವೇ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ (ಸಿಡಿಪಿಓ) ಅಧಿಕಾರಿಯೆಂದು ಮೋಬೈಲ್​ನಲ್ಲಿ ಮಾತನಾಡಿದ ಘಟನೆ ಬೆಳಕಿಗೆ ಬಂದಿದೆ.

ಕುಷ್ಟಗಿ ಪಟ್ಟಣದ 21ನೇ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆ ಪ್ರಕರಣ ಸಂಬಂಧ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸರಸ್ವತಿ ಮಂಗಳೂರು ಎಂಬುವವರು ಸಿಡಿಪಿಓ ಜಯಶ್ರೀ ಅವರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ವಾರ್ಡ್​ ಸದಸ್ಯ ಮಹಾಂತೇಶ ಕಲ್ಲಭಾವಿ ಅವರು, ಸಿಡಿಪಿಓ ಇವರಾ? ಅವರಾ? ಎಂದು ಗೊಂದಲಕ್ಕೀಡಾದರು.

ನಿಜವಾದ ಸಿಡಿಪಿಓ ಯಾರೇಂದರು ಗೊಂದಲಕ್ಕೀಡಾದ ಕುಷ್ಟಗಿ ಜನ

ಜಯಶ್ರೀ ಅವರೇ ನಿಜವಾದ ಸಿಡಿಪಿಓ ಎಂಬುದು ಕೆಲ ಹೊತ್ತಿನ ಬಳಿಕ ತಿಳಿದು ಬಂತು. ಸರಸ್ವತಿ ಅವರು ತಾವೇ ಸಿಡಿಪಿಓ ಎಂದು ಮೊಬೈಲ್​​ನಲ್ಲಿ ಮಾತನಾಡಿದ್ದ ರೆಕಾರ್ಡಿಂಗ್ ಅನ್ನು ಸಾರ್ವಜನಿಕರ ಮದ್ಯೆ ಕೇಳಿಸಿದಾಗ, ಸಿಡಿಪಿಓ ಜಯಶ್ರೀ ಅವರಿಗೆ ಏನೂ ಹೇಳಬೇಕೆನ್ನುವುದು ತಿಳಿಯದೆ ಮುಜುಗುರಕ್ಕೆ ಒಳಗಾದರು.

ABOUT THE AUTHOR

...view details