ಕೊಪ್ಪಳ : ರಾಜ್ಯದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ಕುರಿತು ಜನರಲ್ಲಿ ಅನೇಕ ವಿಧವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಅದೇ ಸಾಲಿಗೆ ನಮ್ಮ ಈಟಿವಿ ಭಾರತ ಪ್ರತಿನಿಧಿಯೊಬ್ಬರು ಸೇರಿಕೊಂಡಿದ್ದಾರೆ.
'ಬಂದಿರೋದು ಕರೀನಾ ಅಲ್ಲೋ ತಮ್ಮ ಕೊರೊನಾ' : ಈಟಿವಿ ಭಾರತ ಪ್ರತಿನಿಧಿಯ ಜಾಗೃತ ಗೀತೆ - ಈಟಿವಿ ಭಾರತ ಕೊಪ್ಪಳ ವರದಿಗಾರ
ಮಹಾಮಾರಿ ಕೋವಿಡ್-19 ಕುರಿತು ಜನರಲ್ಲಿ ಅನೇಕ ವಿಧವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಈಟಿವಿ ಭಾರತ ಕೊಪ್ಪಳ ಜಿಲ್ಲಾ ಪ್ರತಿನಿಧಿ ಮೌನೇಶ್ ಎಸ್. ಬಡಿಗೇರ್ ಅವರು ತಮ್ಮ ಹಾಡಿನ ಮೂಲಕ ಜನರಲ್ಲಿ ಸೋಂಕಿನ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಕೊರೊನಾ ಜಾಗೃತ ಗೀತೆ
ಈಟಿವಿ ಭಾರತ ಕೊಪ್ಪಳ ಜಿಲ್ಲಾ ಪ್ರತಿನಿಧಿ ಮೌನೇಶ್ ಎಸ್. ಬಡಿಗೇರ್ ಅವರು ರಚಿಸಿರುವ ಜಾಗೃತಿ ಗೀತೆ ಜನಮೆಚ್ಚುಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೌಲಾಹುಸೇನ್ ವರ್ದಿ ಅವರು ಗೀತೆಗೆ ಕಂಠದಾನ ಮಾಡಿದ್ದು, ಶಿಕ್ಷಕ ಮೆಹಬೂಬ ಕಿಲ್ಲೇದಾರ್ ಎಂಬುವರು ಸಾಥ್ ನೀಡಿದ್ದಾರೆ.
ದೇಶಿ ಸಂಗೀತ ವಾದ್ಯವನ್ನು ಬಳಸಿಕೊಂಡು ರಚಿಸಿರುವ 'ಬಂದಿರೋದು ಕರೀನಾ ಅಲ್ಲೋ ತಮ್ಮ ಕೊರೊನಾ.' ಎಂಬ ಗೀತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.