ಕರ್ನಾಟಕ

karnataka

ETV Bharat / state

ಜೂನ್ 30 ರವರೆಗೆ ಭಕ್ತರಿಗಿಲ್ಲ ಹುಲಿಗೆಮ್ಮ ದೇವಿ ದರ್ಶನ ಭಾಗ್ಯ..! - ಕೊಪ್ಪಳ ತಾಲೂಕಿನ ಹುಲಗಿ ಗ್ರಾಮ

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಜೂನ್ 30 ರವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

Koppal District Collector P.Sunilakumar statement
ಹುಲಿಗೆಮ್ಮದೇವಿ ದೇವಸ್ಥಾನ ತೆರೆಯುವ ಕುರಿತು ಇಂದು ಸಂಜೆ ನಿರ್ಧಾರ: ಡಿಸಿ ಪಿ.ಸುನೀಲಕುಮಾರ್

By

Published : Jun 6, 2020, 4:27 PM IST

Updated : Jun 6, 2020, 11:48 PM IST

ಕೊಪ್ಪಳ:ಜೂನ್ 30 ರವರೆಗೆ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.

ಜೂನ್ 30 ರವರೆಗೆ ಭಕ್ತರಿಗಿಲ್ಲ ಹುಲಿಗೆಮ್ಮ ದೇವಿ ದರ್ಶನ ಭಾಗ್ಯ..!

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ 'ಎ' ಗ್ರೇಡ್ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಬರುವ ಭಕ್ತರನ್ನ ನಿಯಂತ್ರಿಸಲು ಕಷ್ಟಸಾಧ್ಯ.

ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ದೇವಸ್ಥಾನಕ್ಕೆ ಬರುವ ಭಕ್ತರ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ತಿಂಗಳು ಮುಗಿಯುವವರೆಗೆ ಭಕ್ತರ ಪ್ರವೇಶ ನಿಷೇಧಿಸಿಸಲಾಗಿದೆ ಎಂದರು.

Last Updated : Jun 6, 2020, 11:48 PM IST

ABOUT THE AUTHOR

...view details