ಕೊಪ್ಪಳ:ಬಿಡದಿಯ ಈಗಲ್ಟನ್ರೆಸಾರ್ಟ್ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದಿದ್ದಾರೆ.
ಹುಲಿಗೆಮ್ಮದೇವಿ ದರ್ಶನ ಪಡೆದ ಕಂಪ್ಲಿ ಶಾಸಕ ... ರಮೇಶ್ ಜಾರಕಿಹೊಳಿ ಕುರಿತು ಗಣೇಶ್ ಹೇಳಿದ್ದೇನು? - koppal
ಬಿಡದಿ ರೆಸಾರ್ಟ್ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ- ಜಾಮೀನಿನ ಮೇಲೆ ಬಿಡುಗಡೆ ಆಗ್ತಿದ್ದಂಗೆ ದೇವರ ಮೊರೆಹೋದ ಕಂಪ್ಲಿ ಗಣೇಶ್- ಆರಾಧ್ಯ ದೈವ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದ ಗಣೇಶ್ ಕುಟುಂಬ- ರಮೇಶ್ ಜಾರಕಿಹೊಳಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಣೆ
ಜೆ.ಎನ್. ಗಣೇಶ್ ಅವರ ಆರಾಧ್ಯ ದೈವವಾಗಿರುವ ಕೊಪ್ಪಳ ತಾಲೂಕು ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಇಂದು ಬೆಳಗಿನಜಾವ ಕುಟುಂಬ ಸಮೇತರಾಗಿ ಬಂದು ದರ್ಶನ ಪಡೆದರು. ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಬಳಿಕ ದೇವಿಯ ದರ್ಶನ ಪಡೆದರು.
ಇನ್ನು, ಹಲ್ಲೆ ಪ್ರಕರಣ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ ಗಣೇಶ್, ಪ್ರಕರಣದ ಬಗ್ಗೆ ನಾನೇನು ಮಾತನಾಡುವುದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸಮುದಾಯದವರು. ಹೀಗಾಗಿ ಅವರಿಗೆ ನಾನು ನೈತಿಕ ಬೆಂಬಲ ನೀಡುತ್ತೇನೆ. ನಾನು ಸಣ್ಣವನಿದ್ದಾಗಿನಿಂದಲೂ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುತ್ತೇನೆ. ಇದರಲ್ಲಿ ವಿಶೇಷತೆ ಏನೂ ಇಲ್ಲವೆಂದು ಹೇಳಿದರು.