ಗಂಗಾವತಿ:ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಕಂದಾಯ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು, ಮಾಲು ಸಮೇತ ವಾಹನ ಜಪ್ತಿ ಮಾಡಿಕೊಂಡು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಕಲ್ಲು ಸಾಗಾಣಿಕೆ: ಟ್ರಾಕ್ಟರ್ ವಶ ಪಡೆದು ದೂರು ದಾಖಲು - ಅಕ್ರಮ ಕಲ್ಲು ಸಾಗಾಣಿಕೆ
ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

illegal stones transport
ಗಂಗಾವತಿ ನಗರದಿಂದ ಮಲ್ಲಾಪುರದವರೆಗೆ ಹಮ್ಮಿಕೊಂಡಿದ್ದ ಗಸ್ತು ವೇಳೆ, ವ್ಯಕ್ತಿಯೊಬ್ಬ ಟ್ರಾಕ್ಟರ್ದಲ್ಲಿ ಅಕ್ರಮವಾಗಿ ಕಲ್ಲು ಹೇರಿಕೊಂಡು ನಗರಕ್ಕೆ ಸಾಗಿಸುತ್ತಿದ್ದನು. ಈ ಬಗ್ಗೆ ಗಮನಿಸಿದ ಅಧಿಕಾರಿಗಳು ತಡೆದು ವಿಚಾರಿಸಿದ್ದಾರೆ.
ಆದರೆ ಯಾವುದೇ ಇಲಾಖೆಯಿಂದ ಅಧಿಕೃತ ಅನುಮತಿ ಇಲ್ಲದೇ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಿತ್ರವೆಂದರೆ ಅಕ್ರಮ ಕಲ್ಲು ಸಾಗಿಸುತ್ತಿದ್ದ ಈ ವಾಹನದ ಎಂಜಿನ್ ಮತ್ತು ಟ್ರಾಲಿಗೆ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎನ್ನಲಾಗಿದೆ.