ಗಂಗಾವತಿ(ಕೊಪ್ಪಳ):ತಾಲೂಕಿನಕನಕಗಿರಿ ಕ್ಷೇತ್ರಇತ್ತೀಚೆಗೆ ನಡೆದಕೋಮು ಘರ್ಷಣೆ ಹಾಗೂ ಪಿಎಸ್ಐ ಹಗರಣದ ಹಣಕಾಸಿನ ವ್ಯವಹಾರದ ಸುದ್ದಿಯಲ್ಲಿರುವಾಗಲೇ ಇದೀಗ ಬೃಹತ್ ಪ್ರಮಾಣದ ಅಕ್ರಮ ಮರಳುಗಣಿಗಾರಿಕೆ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ಕನಕಗಿರಿ ತಾಲ್ಲೂಕಿನ ಕ್ಯಾರಿಹಾಳ, ಉದ್ದಿಹಾಳ ಮತ್ತು ನವಲಿ ಗ್ರಾಮದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ದಿನಕ್ಕೆ ನೂರಾರು ಟ್ರಾಕ್ಟರ್ಗಳಲ್ಲಿ ಅಕ್ರಮ ಮರಳು ಸಾಗಿಸಲಾಗುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯದೆ ಮತ್ತು ತೆರಿಗೆ ಪಾವತಿಸದೆ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.