ಕೊಪ್ಪಳ: ಹನುಮ ಜಯಂತಿ ಆಚರಣೆ ಹಿನ್ನೆಲೆ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಸ್ಥಳ ಅಂಜನಾದ್ರಿ ಪರ್ವತದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿವೆ.
ಹನುಮ ಜನಿಸಿದ ಬೆಟ್ಟದಲ್ಲಿ ನಡೆಯುತ್ತಿದೆ ನಿರಂತರ ಹನುಮ ಚಾಲೀಸ್...!! - ಹನುಮ ಜಯಂತಿ ಆಚರಣೆ
ಹನುಮ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು,ನಡೆಯುತ್ತಿವೆ
ಹನುಮ ಜಯಂತಿ ಆಚರಣೆ
ಹನುಮ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ನಡೆಯುತ್ತಿವೆ. ಹನುಮಾನ್ ಚಾಲೀಸ್, ರಾಮ ಮಾನಸ ಚರಿತ ಪಠಣ ನಡೆದವು.
ಇನ್ನು ಹನುಮ ಮಾಲೆ ಧರಿಸಿ ವೃತ ಕೈಗೊಂಡಿದ್ದ ನೂರಾರು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬೆಳಗ್ಗೆ ಬಂದು ಮಾಲೆಯನ್ನು ವಿಸರ್ಜಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.