ಕುಷ್ಟಗಿ (ಕೊಪ್ಪಳ):ತಾಲೂಕಿನಲ್ಲಿಸಂಡೇ ಲಾಕ್ಡೌನ್ ಜಾರಿಯಲ್ಲಿರುವುದರಿಂದ ನಿಜ ಸುಖಿ ಹಡಪದ ಅಪ್ಪಣ್ಣ ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಕುಷ್ಟಗಿಯಲ್ಲಿ ಸಂಡೇ ಕರ್ಫ್ಯೂ ಹಿನ್ನೆಲೆ ಸರಳವಾಗಿ ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ - ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ.
ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರದಂದು ಲಾಕ್ಡೌನ್ ಜಾರಿ ಮಾಡಿರೋ ಹಿನ್ನೆಲೆ ಕುಷ್ಟಗಿಯಲ್ಲಿ ನಿಜ ಸುಖಿ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ
ತಹಶೀಲ್ದಾರ್ ಎಂ.ಸಿದ್ದೇಶ ಅವರು, ಶ್ರೀ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಜಾತಿ ರಹಿತ ಸಮಾಜ ನಿರ್ಮಿಸಲು ಬಸವಣ್ಣರಾದಿಯಾಗಿ ಹಲವು ಶರಣ, ಶರಣೆಯರಲ್ಲಿ ಹಡಪದ ಅಪ್ಪಣ್ಣ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದರು.
ಬಸವಣ್ಣನವರ ಅಪ್ತರಾಗಿ ಕೆಲಸ ನಿರ್ವಹಿಸಿದ್ದ ಅಪ್ಪಣ್ಣ ಅವರು, ಸುಮಾರು 200ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಡಪದ ಸಮಾಜದ ಅಧ್ಯಕ್ಷ ಶಿವಾಜಿ ಹಡಪದ, ಶಿರೆಸ್ತೇದಾರ ರಜನೀಕಾಂತ ಕೆಂಗಾರಿ, ಚೇತನ್ ಉಪಸ್ಥಿತರಿದ್ದರು.