ಕುಷ್ಟಗಿ(ಕೊಪ್ಪಳ):ಲಾಕಡೌನ್ ಜಾರಿಯಾದ ಬಳಿಕ ಬಡ ಜನರಿಗೆ ಹಸಿವಿನ ಸಮಸ್ಯೆ ನೀಗಿಸಲು ಕುಷ್ಟಗಿ ಗ್ರಾನೈಟ್ ಮಾಲೀಕರ ಸಂಘ ನೀಡಿದ ಅಹಾರ ಸಾಮಗ್ರಿ ಕಿಟ್ಗಳನ್ನು ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯಿತಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಪತ್ತೆಯಾಗಿದೆ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ದಾನಿಗಳಾದ ಗ್ರಾನೈಟ್ ಮಾಲೀಕರು ಅಹಾರ ಕಿಟ್ಗಳನ್ನು ತಮ್ಮ ಸಂಘದ ಮೂಲಕ ತಾಲೂಕಾಡಳಿತಕ್ಕೆ ನೀಡಿದ್ದರು. ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅಂಟರಠಾಣಾ ಗ್ರಾಮ ಪಂಚಾಯಿತಿಗೆ ವಿತರಿಸಿ 2 ತಿಂಗಳ ಕಳೆದರೂ 117 ಅಹಾರದ ಕಿಟ್ಗಳ ಪೈಕಿ 17 ಮಾತ್ರ ವಿತರಿಸಿ, ಉಳಿದ 100 ಕಿಟ್ಗಳು ಬಡ ವರ್ಗದವರಿಗೆ ಹಂಚಿಕೆ ಮಾಡದೇ ನಿರ್ಲಕ್ಷಿಸಿದೆ.