ಗಂಗಾವತಿ:ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ವೈಯಕ್ತಿವಾಗಿ 2 ಸಾವಿರ ರೂಪಾಯಿ ನೀಡುವುದಾಗಿ ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ಗಿಡ್ಡಿ ಘೋಷಿಸಿದ್ದಾರೆ.
ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ಗಿಡ್ಡಿ ಇದನ್ನೂಓದಿ: ಕೊರೊನಾ ಸೋಂಕದ ಕೊಪ್ಪಳದ ಗ್ರಾಮಗಳು: ಗ್ರಾಮಸ್ಥರ ಸ್ವಯಂ ನಿರ್ಬಂಧ, ಜಾಗೃತಿ ಮಾದರಿ
ಕೊಪ್ಪಳ ಜಿಲ್ಲೆಯಲ್ಲಿ, ಅದರಲ್ಲೂ ಕಾರಟಗಿ, ಕನಕಗಿರಿ ಒಳಗೊಂಡ ಅವಿಭಜಿತ ಗಂಗಾವತಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡರೆ, ಚುನಾಯಿತ ಪ್ರತಿನಿಧಿಗಳು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ರೋಗ ನಿಯಂತ್ರಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.