ಗಂಗಾವತಿ(ಕೊಪ್ಪಳ):ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಭಾನುವಾರ ಒಂದು ದಿನ ರಾಜ್ಯಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದೆ. ಆದ್ರೆ ಗಂಗಾವತಿ ನಗರದಲ್ಲಿ ಮಾತ್ರ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ.
ಗಂಗಾವತಿ: ಲಾಕ್ಡೌನ್ ಜಾರಿ ಇದ್ದರೂ ವ್ಯಾಪಾರ-ವಹಿವಾಟು ಯಥಾಸ್ಥಿತಿ
ರಾಜ್ಯಾದ್ಯಂತ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದ್ರೆ ಗಂಗಾವತಿ ನಗರದಲ್ಲಿ ಮಾತ್ರ ಸಹಜವಾಗಿ ವ್ಯಾಪಾರ-ವಹಿವಾಟು ನಡೆಯುತ್ತಿದೆ.
ಲಾಕ್ಡೌನ್ ಜಾರಿ ಇದ್ದರೂ ಸಹಜ ವ್ಯಾಪಾರ-ವಹಿವಾಟು
ಲಾಕ್ಡೌನ್ ಇರುವ ಹಿನ್ನೆಲೆ ಅನಗತ್ಯವಾಗಿ ಯಾರೂ ಮನೆಯಿಂದ ಹೊರಗಡೆ ಬರದಂತೆ ಆದೇಶಿಸಲಾಗಿತ್ತು. ಆದರೆ ವಾರದ ಮಾರುಕಟ್ಟೆಯ ದಿನವಾದ ಇಂದು ನಗರದಲ್ಲಿ, ವಿಶೇಷವಾಗಿ ಡೈಲಿ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮಾಂಸದ ವ್ಯಾಪಾರ ಜೋರಾಗಿದೆ.
ಬೆಳಗ್ಗೆ ಪೊಲೀಸ್ ಮತ್ತು ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ಆದರೆ ಪೊಲೀಸರು ಅತ್ತ ತೆರಳುತ್ತಿದ್ದಂತೆಯೇ ಮತ್ತೆ ವ್ಯಾಪಾರಿಗಳು ತಮ್ಮ ವಹಿವಾಟನ್ನು ಆರಂಭಿಸಿದ್ದಾರೆ. ಜನರ ಓಡಾಟವೂ ಮಾರುಕಟ್ಟೆಯಲ್ಲಿ ಸಹಜವಾಗಿದೆ.