ಕರ್ನಾಟಕ

karnataka

ETV Bharat / state

ತುಂಗಭದ್ರಾ ಜಲಾಶಯಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಭೇಟಿ, ಪರಿಶೀಲನೆ - ಕೊಪ್ಪಳ

ಕಾರ್ಖಾನೆಗಳು ನೀರು ಕದಿಯುತ್ತಿವೆ. ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಈವರೆಗೂ ನೀರಿಲ್ಲ. ನೀರಿಗಾಗಿ ರೈತರು ಕಾದು ಕುಳಿತಿದ್ದಾರೆ ಎಂದು ಮಾಜಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ರು. ಜೊತೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ಶಿವರಾಜ್ ತಂಗಡಗಿ

By

Published : Aug 6, 2019, 1:31 PM IST

ಕೊಪ್ಪಳ:ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳು ಅನಧಿಕೃತವಾಗಿ ನೀರು ತೆಗೆದುಕೊಳ್ಳುತ್ತಿದ್ದರೂ ನೀವು ಸುಮ್ಮನಿರೋದು ಏಕೆ ಎಂದು ಅಧಿಕಾರಿಗಳನ್ನುಶಿವರಾಜ್ ತಂಗಡಗಿ ತರಾಟೆಗೆ ತೆಗೆದುಕೊಂಡರು. ಜಲಾಶಯದ ಮುಖ್ಯ ಅಭಿಯಂತರ ಮಂಜಪ್ಪ ಅವರನ್ನು ಕರೆದುಕೊಂಡು ಹೋಗಿ ಜಲಾಶಯದಿಂದ ನೀರೆತ್ತಲು ಕಾರ್ಖಾನೆಗಳು ಬಳಸುತ್ತಿರುವ ಮೋಟಾರ್​ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ರು.

ಮಾಜಿ ಸಚಿವ ಶಿವರಾಜ್ ತಂಗಡಗಿ

ಇದೇ ವೇಳೆ ಕಾರ್ಖಾನೆಗಳಿಗೆ ನೀರು ಏಕೆ ಹರಿಯುತ್ತಿದೆ ಎಂದು ಅಧಿಕಾರಿಗಳೊಂದಿಗೆ ಮಾಜಿ ಸಚಿವ ತಂಗಡಗಿ ವಾಗ್ವಾದ ನಡೆಸಿ ಕ್ಲಾಸ್ ತೆಗೆದುಕಂಡ ಘಟನೆಯೂ ನಡೆಯಿತು.

ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಇದ್ದರು.

ABOUT THE AUTHOR

...view details