ಕರ್ನಾಟಕ

karnataka

ETV Bharat / state

'ಪಿಎಂ ಮೋದಿಗೆ ಹೂಗುಚ್ಛ ಕೊಟ್ಟಿದ್ದ ಬಿಜೆಪಿ ಮುಖಂಡರು ಖೋಟಾನೋಟು ಕೇಸ್ನಲ್ಲಿ ಜೈಲಿಗೆ ಹೋಗಿದ್ದರು..' - ಖೋಟಾ ನೋಟು ಪ್ರಕರಣ

ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಾದ ಗೋಲ್ಮಾಲ್ ಪ್ರಕರಣಗಳನ್ನು ನಾನೇ ಅಧಿಕಾರದಲ್ಲಿದ್ದಾಗ ಸಿಐಡಿಗೆ ವಹಿಸಿದ್ದೇನೆ. ಈಗೇನ್ರಿ ಈತ ಸಿಬಿಐಗೆ ಕೊಡೋದು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕನಕಗಿರಿ ಶಾಸಕ ಬಸವರಾಜ್ ದಡೇಸೂಗುರುಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಮಾಜಿ ಸಚಿವ ಶಿವರಾಜ ತಂಗಡಗಿ

By

Published : Oct 1, 2019, 3:59 PM IST

ಕೊಪ್ಪಳ:ಜಿಲ್ಲೆಯ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಾದ ಗೋಲ್ಮಾಲ್ ಪ್ರಕರಣಗಳನ್ನು ನಾನೇ ಅಧಿಕಾರದಲ್ಲಿದ್ದಾಗ ಸಿಐಡಿಗೆ ವಹಿಸಿದ್ದೇನೆ. ಈಗೇನ್ರಿ ಈತ ಸಿಬಿಐಗೆ ಕೊಡೋದು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಕನಕಗಿರಿ ಶಾಸಕ ಬಸವರಾಜ್ ದಡೇಸೂಗುರುಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಣ್ಣ ನೀರಾವರಿ ಇಲಾಖೆ ಅಕ್ರಮ ಕುರಿತಂತೆ ಸುಮಾರು 27 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, 40 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮಕೈಗೊಂಡಿದ್ದೆ. ನಾನೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದೆ. ಅದರಂತೆ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣವನ್ನೂ ಸಹ ಸಿಐಡಿಗೆ ನೀಡಿದ್ದೆ. ಅಧಿಕಾರದಲ್ಲಿಯೇ ಇಂತಹ ನಿರ್ಧಾರ ಮಾಡಿದ್ದೆ. ಈಗೇನ್ರಿ ಈತ ಈ ಪ್ರಕರಣಗಳನ್ನು ಸಿಬಿಐಗೆ ವಹಿಸುತ್ತೇವೆ ಅನ್ನೋದು ಎಂದು ಟಾಂಗ್ ನೀಡಿದರು.

ಮಾಜಿ ಸಚಿವ ಶಿವರಾಜ ತಂಗಡಗಿ..

ಮೊದಲು ಅವರು ಪ್ರಕರಣಗಳನ್ನು ಸಿಬಿಐಗೆ ವಹಿಸಲಿ. ಆಮೇಲೆ ನಾನು ಈ ಕೇಸ್ ಬಗ್ಗೆ ಮಾತನಾಡುತ್ತೇನೆ. ಇನ್ನು, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಧೈರ್ಯ ಇದ್ರೇ ಈಗಿರುವ ಶಾಸಕರ ಅವಧಿಯಲ್ಲಾದ ಪ್ರಕರಣಗಳನ್ನೂ ಸಹ ಸಿಬಿಐಗೆ ವಹಿಸಲಿ. ಕಕ್ಕರಗೋಳದಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತನ ಕೊಲೆ ಹಾಗೂ ಬಿಜೆಪಿ ಮುಖಂಡರ ಖೋಟಾ ನೋಟು ಪ್ರಕರಣಗಳನ್ನು ಸಹ ಸಿಬಿಐಗೆ ವಹಿಸಲಿ.‌ ಖೋಟಾ ನೋಟು ಪ್ರಕರಣದಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳ ಬಿಜೆಪಿ ಶಾಸಕರು, ಮುಖಂಡರು ಭಾಗಿಯಾಗಿದ್ದಾರೆ.

ಇನ್ನು, ಪ್ರಧಾನಿ ಮೋದಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಬಿಜೆಪಿ ಮುಖಂಡರೇ ಈ ಪ್ರಕರಣದಲ್ಲಿ ಜೈಲು ಕಂಡು ಬಂದಿದ್ದಾರೆ. ಆ ಪ್ರಕರಣಗಳ ಜೊತೆಗೆ ಈ ಎರಡೂ ಪ್ರಕರಣಗಳನ್ನೂ ತನಿಖೆ ಮಾಡಲು ಸಿಬಿಐಗೆ ವಹಿಸಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದರು.

ABOUT THE AUTHOR

...view details