ಗಂಗಾವತಿ:ಸ್ಥಳೀಯ ಶಾಸಕ ಅಪುಟ ಸುಳ್ಳುಗಾರ, ಈತ ಬಂದಿರುವುದು ಅಭಿವೃದ್ಧಿ ಕೆಲಸದ ಆಧಾರದ ಮೇಲಲ್ಲ. ಇವರ ಇತಿಹಾಸ ನೋಡಿ, ಅಧಿಕಾರಕ್ಕಾಗಿ ಏನೆಲ್ಲಾ ಮಾಡಿದ್ದಾರೆ ಎಂಬುವುದು ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.
ಸ್ಥಳೀಯ ಶಾಸಕ ಅಪ್ಪಟ ಸುಳ್ಳುಗಾರ, ಮುನವಳ್ಳಿ ವಿರುದ್ಧ ಹರಿಹಾಯ್ದ ಮಾಜಿ ಸಚಿವ - ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಪರಣ್ಣ ಮುನವಳ್ಳಿ ಯಾವಾಗೆಲ್ಲಾ ಗಂಗಾವತಿ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೋ ಆಗೆಲ್ಲಾ ಬರಿ ಗಲಾಟೆ ಮಾಡಿಸುವುದು, ಕೋಮು ಗಲಭೆ ಸೃಷ್ಟಿಸುವುದು, ಕೊಲೆ ಮಾಡಿಸುವ, ಚಾಕು - ಚೂರಿ ಹಾಕಿಸುವ ಗೂಂಡಾಗಿರಿ, ರೌಡಿಯಿಸಂ ಮಾಡಿಸುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾವತಿ ನಗರಸಭೆಯಲ್ಲಿ ಜನಾದೇಶ ಇಲ್ಲದಿದ್ದರೂ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಶಾಸಕ ಹವಣಿಸುತ್ತಿದ್ದಾರೆ. ಇದು ಸಾಕಷ್ಟು ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿದೆ. ಪರಣ್ಣ ಮುನವಳ್ಳಿ ಯಾವಾಗೆಲ್ಲಾ ಗಂಗಾವತಿ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೋ ಆಗೆಲ್ಲಾ ಬರಿ ಗಲಾಟೆ ಮಾಡಿಸುವುದು, ಕೋಮು ಗಲಭೆ ಸೃಷ್ಟಿಸುವುದು, ಕೊಲೆ ಮಾಡಿಸುವ, ಚಾಕು - ಚೂರಿ ಹಾಕಿಸುವ ಗೂಂಡಾಗಿರಿ, ರೌಡಿಯಿಸಂ ಮಾಡಿಸುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.
ಇಂಥಹದ್ದೆಲ್ಲಾ ನಮ್ಮ ಸಂಸ್ಕೃತಿ ಅಲ್ಲ ಎಂದು ಬಾಯಿಯಿಂದ ಹೇಳುತ್ತಾರೆ. ಆದರೆ, ಅವರ ಸಂಸ್ಕೃತಿ ಇರುವುದೇ ಹಾಗೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಶಾಸಕರ ಮೇಲೆ ಆರೋಪಗಳ ಸುರಿಮಳೆಯನ್ನೇ ಹರಿಸಿದರು.