ಕುಷ್ಟಗಿ (ಕೊಪ್ಪಳ) : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಕಾರ್ಯಕಾರಿ ಸಮಿತಿ 2020-21ನೇ ಚುನಾವಣೆ ಮತ ಎಣಿಕೆ ಅಹೋರಾತ್ರಿ ನಡೆಯಿತು. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು 27 ಜನ ಶಿಕ್ಷಕರು ಆಯ್ಕೆ ಆಗಿದ್ದಾರೆ.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ, 21 ಸ್ಥಾನಗಳಿಗೆ, 27 ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಪುರುಷರ 14 ಸ್ಥಾನಕ್ಕೆ, 18 ಜನ, ಮಹಿಳೆಯರ 7 ಸ್ಥಾನಗಳಿಗೆ 9 ಜನ ಸ್ಪರ್ಧಿಸಿದ್ದರಿಂದ ತುರುಸಿನ ಪೈಪೋಟಿ ಏರ್ಪಟ್ಟಿತ್ತು.
ಡಿ.15 ರಂದು ನಡೆದ ಮತದಾನದಲ್ಲಿ 1057 ಶಿಕ್ಷಕ ಮತದಾರರ ಪೈಕಿ 871 ಮತದಾರರು ತಮ್ಮ ಮತ ಚಲಾಯಿಸಿದ್ದರು. ಒಟ್ಟಾರೆ ಶೇ.82 ರಷ್ಟು ಮತದಾನ ಆಗಿದೆ. ನಿನ್ನೆ ಸಂಜೆ 4 ಗಂಟೆಯ ನಂತರ ಆರಂಭವಾದ ಮತ ಎಣಿಕೆ, ಅಹೋರಾತ್ರಿ 2 ಗಂಟೆಯವರೆಗೆ ನಡೆಯಿತು.
ಓದಿ :ಪ್ರಯಾಣಿಕರಿಗೆ ಸಿಹಿ ಸುದ್ದಿ: ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್ಗಳ ಪ್ರಯಾಣ ದರ ವಿಶೇಷ ವಿನಾಯಿತಿ
ಫಲಿತಾಂಶದ ವಿವರ :
ಮಲ್ಲಪ್ಪ ಕುದರಿ(647), ಮಹೇಶ ಪಡಿ (587), ಕಳಕಮಲ್ಲೇಶ ಭೋಗಿ (510), ಹೈದರಲಿ ಜಾಲಿಹಾಳ (466), ಬೀರಪ್ಪ ಕುರಿ (461), ಗುನ್ನಾಳ ನಿಂಗಪ್ಪ (454), ಲಕ್ಷ್ಮಣ ಪೂಜಾರ (447), ಸಿದ್ರಾಮಪ್ಪ ಅಮರಾವತಿ (441), ಹೊನ್ನಪ್ಪ ಡೊಳ್ಳೀನ್ (423), ರುದ್ರೇಶ ಬೂದಿಹಾಳ (420), ಯಲ್ಲನಗೌಡ ಪಾಟೀಲ (407), ಯಮನಪ್ಪ ಲಮಾಣಿ (402), ಮಂಜಪ್ಪ ಪೂಜಾರ (388), ಅಲ್ತಾಫ್ ಹುಸೇನ್ (369). ವಿದ್ಯಾ ಕಂಪಾಪೂರಮಠ (559), ಗೌರಮ್ಮತಳವಾರ (498), ರುದ್ರಮ್ಮ (427), ಹೆಚ್. ಗಿರಿಜಾದೇವಿ (408), ಕಲ್ಪನಾ ಹೆಂಡೆಗಾರ (407), ಮುರ್ತುಜಾಬೀ (405) ಗುರುಪಾದಮ್ಮ ಭಂಡಾರಿ (402) ಮತ ಪಡೆದು ವಿಜೇತರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಟಿ.ವೈ. ಪಂಚಮ್, ಸಹಾಯಕ ಅಧಿಕಾರಿಯಾಗಿ ಮೋಹನಸಿಂಗ್ ಕಾರ್ಯ ನಿರ್ವಹಿಸಿದರು.