ಗಂಗಾವತಿ:ಈ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆ ಹಾಗೂ ಭೀಕರ ಬಿರುಗಾಳಿಗೆ ಬಹುತೇಕ ಭತ್ತದ ಬೆಳೆ ನಾಶವಾಗಿದೆ. ಕೂಡಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.
ಸರ್ಕಾರ ಕೊರೊನಾ ಹಿಂದೆ ಹೋದರೆ ರೈತರು ಸತ್ತಾರು: ಮಾಜಿ ಸಚಿವ ತಂಗಡಗಿ - ಮಾಜಿ ಸಚಿವ ಶಿವರಾಜ ತಂಗಡಗಿ
ಗಂಗಾವತಿಯಲ್ಲಿ ಸುರಿದ ಧಾರಾಕಾರ ಮಳೆಗೆ ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಹೀಗಾಗಿ ಸರ್ಕಾರ ರೈತರ ಕಡೆ ಗಮನಹರಿಸಬೇಕು ಎಂದು ಮಾಜಿ ಸಚಿವ ಆಗ್ರಹಿಸಿದರು.
ಮಾಜಿ ಸಚಿವ ತಂಗಡಗಿ
ಹಾನಿಗೀಡಾದ ಪ್ರದೇಶದಲ್ಲಿ ಸಂಚಾರ ನಡೆಸಿ ಮಾತನಾಡಿ, ಸರ್ಕಾರ ಕೇವಲ ಕೊರೊನಾ ಎಂದು ಅದರ ಬೆನ್ನು ಬಿದ್ದರೆ ರೈತರು ಸಾಯುತ್ತಾರೆ. ಕೊರೊನಾಕ್ಕಿಂತ ರೈತರ ಸ್ಥಿತಿ ಗಂಭೀರವಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕು ಎಂದು ಹೇಳಿದರು.
ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅಭಿವೃದ್ಧಿಯ ಯೋಜನೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿ. ತುರ್ತು ಕಾರ್ಯಕ್ಕೆ ಅಗತ್ಯವಾಗುವ ಪೂರಕ ಯೋಜನೆ ಜಾರಿ ಮಾಡಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.