ಕರ್ನಾಟಕ

karnataka

ETV Bharat / state

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ: ಟ್ಯ್ರಾಕ್ಟರ್ ಬಾಡಿಗೆ ಪಾವತಿಸಲು ಒತ್ತಾಯಿಸಿ ಪ್ರತಿಭಟನೆ - ಗಂಗಾವತಿಯಲ್ಲಿ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಸಂದರ್ಭದಲ್ಲಿ ಬಳಸಿಕೊಳ್ಳಲಾದ ಟ್ಯ್ರಾಕ್ಟರ್ ವಾಹನಗಳ ಬಾಡಿಗೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ‌ ಪ್ರಾಂತ ಕೃಷಿ ಕೂಲಿಕಾರ ಹಾಗೂ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

protest in gangavathi
ಟ್ರಾಕ್ಟರ್ ಬಾಡಿಗೆ ಪಾವತಿಗೆ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ

By

Published : Oct 12, 2020, 2:41 PM IST

ಗಂಗಾವತಿ:ಕಳೆದ ವರ್ಷದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಸಂದರ್ಭದಲ್ಲಿ ಬಳಸಿಕೊಳ್ಳಲಾದ ಟ್ಯ್ರಾಕ್ಟರ್ ವಾಹನಗಳ ಬಾಡಿಗೆ ನೀಡಬೇಕು ಎಂದು ಒತ್ತಾಯಿಸಿ ವಾಹನ ಮಾಲೀಕರು, ರೈತರು, ಕೂಲಿಕಾರರು ಪ್ರತಿಭಟನೆ ನಡೆಸಿದರು.

ಇಲ್ಲಿನ‌ ಜಿಲ್ಲಾ ಪಂಚಾಯತ್​ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಮುಂದೆ ಕರ್ನಾಟಕ‌ ಪ್ರಾಂತ ಕೃಷಿ ಕೂಲಿಕಾರ ಹಾಗೂ ರೈತ ಸಂಘದಿಂದ ಪ್ರತಿಭಟನೆ ನಡೆಸಿ, ಕೂಡಲೇ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

2019-20ನೇ ಸಾಲಿನಲ್ಲಿ ಗುಂಡೂರು, ಹೊಸಳ್ಳಿ, ಚಿಕ್ಕಜಂತಕಲ್, ಢಣಾಪುರ ಹಾಗೂ ಮುಸ್ಟೂರು ಗ್ರಾಮ ಪಂಚಾಯತ್​ಗಳಿಂದ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ನಾಲ್ಕಾರು ಬಾರಿ‌ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ABOUT THE AUTHOR

...view details