ಕರ್ನಾಟಕ

karnataka

ETV Bharat / state

ಕುಷ್ಟಗಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊಠಡಿಗಳನ್ನು ಪರಿಶೀಲಿಸಿದ ನೂತನ ಡಿಸಿ - Koppal DC hospital visit news

ಕೊಪ್ಪಳದ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಕುಷ್ಟಗಿ ತಾಲೂಕಿಗೆ ಮೊದಲ ಭೇಟಿ ನೀಡಿದ ಸುರಾಳ್ಕರ್ ವಿಕಾಸ ಕಿಶೋರ್ ಅವರು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉದ್ದೇಶಿತ ಕೋವಿಡ್ ಆಸ್ಪತ್ರೆಯ ಕೊಠಡಿಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ ಕಿಶೋರ್
ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ ಕಿಶೋರ್

By

Published : Jul 3, 2020, 10:20 AM IST

ಕುಷ್ಟಗಿ (ಕೊಪ್ಪಳ) : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯತಂತ್ರಗಳನ್ನು ಅನುಸರಿಸಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ ಕಿಶೋರ್ ಹೇಳಿದರು.

ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಕುಷ್ಟಗಿ ತಾಲೂಕಿಗೆ ನಿನ್ನೆ ಮೊದಲ ಭೇಟಿ ನೀಡಿದ ಅವರು, ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉದ್ದೇಶಿತ ಕೋವಿಡ್ ಆಸ್ಪತ್ರೆಯ ಕೊಠಡಿಗಳನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕಿತರ ಚಿಕಿತ್ಸೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೈಗೊಳ್ಳುವ ಚಿಕಿತ್ಸಾ ಕ್ರಮಗಳನ್ನು ಇಲ್ಲಿಯೂ ಅನುಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಜನರ ಸಹಕಾರವೂ ಅಗತ್ಯವಾಗಿದೆ ಎಂದರು.

ಹೆರಿಗೆ ವಾರ್ಡ್‌ ಸ್ಥಳಾಂತರ:
ಆಸ್ಪತ್ರೆಯ ನೆಲ ಮಹಡಿಯಲ್ಲಿದ್ದ ಹೆರಿಗೆ ವಾರ್ಡ್‌ ಅನ್ನು ಮೇಲಂತಸ್ತಿಗೆ ಸ್ಥಳಾಂತರಿಸುವ ಕುರಿತು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ ಅವರೊಂದಿಗೆ ಚರ್ಚಿಸಿದರು. ನಂತರ ಮೇಲಂತಸ್ತಿನ ಕೊಠಡಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ, ಹೀಗಾಗಿ ತುರ್ತಾಗಿ ಶೌಚಾಲಯದ ವ್ಯವಸ್ಥೆಗೆ ಸೂಚಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಲಿಂಗರಾಜ್, ತಹಶೀಲ್ದಾರ್ ಸಿದ್ದೇಶ ಎಂ., ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು, ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಮಂತ್ರಿ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details