ಗಂಗಾವತಿ:ಕಾರಟಗಿ ತಾಲೂಕಿನ ಕಕ್ಕರಗೋಳದಲ್ಲಿ ನಡೆದ ದಲಿತ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ರಾಘವೇಂದ್ರ ಚಲುವಾದಿ ಕೊಲೆ ಪ್ರಕರಣದಲ್ಲಿ ಸ್ವತಃ ದಲಿತ ಶಾಸಕ ಬಸವರಾಜ ದಢೇಸಗೂರು ಅಡ್ಡಿಯಾಗಿದ್ದಾರೆ ಎಂದು ಮೃತನ ಚಿಕ್ಕಪ್ಪ ಚಲುವಾದಿ ಮರಿಯಪ್ಪ ಬರಗೂರು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಮಾತನಾಡಿ, ಐದು ತಿಂಗಳ ಹಿಂದೆ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಈಗಲೂ ಹೊರಗಿದ್ದಾರೆ ಎಂದರು.