ಗಂಗಾವತಿ (ಕೊಪ್ಪಳ): ತಾಲೂಕಿನಲ್ಲಿ ಮತ್ತೆ ಮೂರು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಶ್ರೀರಾಮನಗರದ ಒಂದೇ ಮನೆಯಲ್ಲಿ ಮೂವರಿಗೆ ಸೋಂಕು ತಗುಲಿದೆ.
ಆಂಧ್ರದಿಂದ ಗಂಗಾವತಿಗೆ ಬಂದ ಒಂದೇ ಕುಟುಂಬದ ಮೂವರಿಗೆ ಕೊರೊನಾ - ಕೊರೊನಾ ಪಾಸಿಟಿವ್ ಸುದ್ದಿ
40 ವರ್ಷದ ಪುರುಷ, 36 ವರ್ಷದ ಮಹಿಳೆ ಹಾಗೂ 17 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೋಂಕಿತ ಗಂಡ, ಹೆಂಡತಿ ಮತ್ತು ಮಗಳು ಕಳೆದ ವಾರವಷ್ಟೇ ವಿಜಯವಾಡದಿಂದ ಗಂಗಾವತಿಗೆ ಬಂದಿದ್ದರು.
ಮೂವರಿಗೆ ಕೊರೊನಾ ಪಾಸಿಟಿವ್
ಓದಿ:ದೇಶದಲ್ಲಿ ಒಂದೇ ದಿನ 13 ಸಾವಿರ ಕೋವಿಡ್ ಕೇಸ್ ಪತ್ತೆ: 2 ಲಕ್ಷ ಸೋಂಕಿತರು ಗುಣಮುಖ
ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ಕಾರಣ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತ ಪ್ರಯೋಗಾಲಯದ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.