ಕೊಪ್ಪಳ:ನಗರದ ಶ್ರೀ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ.
ಯೋಗಭ್ಯಾಸ, ಕೇರಂ ಆಡುವ ಮೂಲಕ ರಿಲ್ಯಾಕ್ಸ್ ಆದ ಸೋಂಕಿತರು ಇಂದು ಆಸ್ಪತ್ರೆಯಲ್ಲಿನ ಸೋಂಕಿತರು ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗಭ್ಯಾಸ ಮಾಡಿದರು. ಬಳಿಕ ಕೇರಂ ಆಡುವ ಮೂಲಕ ರಿಲ್ಯಾಕ್ಸ್ ಆದರು. ಬೆಳಗಿನ ಜಾವ ಕೋವಿಡ್ ಕೇರ್ ಸೆಂಟರ್ಗೆ ಆಗಮಿಸಿದ ಗವಿಸಿದ್ದೇಶ್ವರ ಸ್ವಾಮೀಜಿ, ಸೋಂಕಿತರ ಆರೋಗ್ಯ ವಿಚಾರಿಸಿದರು.
ಎರಡನೇ ದಿನದ ಲಾಕ್ಡೌನ್ಗೆ ಕೊಪ್ಪಳ ನಗರ ಸಂಪೂರ್ಣ ಸ್ತಬ್ಧ
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾರಿ ಮಾಡಲಾಗಿರುವ ಸಂಪೂರ್ಣ ಲಾಕ್ಡೌನ್ನ ಎರಡನೇ ದಿನವಾದ ಇಂದು ಕೊಪ್ಪಳ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ವಾಹನಗಳ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪೊಲೀಸರು ಅನಗತ್ಯವಾಗಿ ಓಡಾಡುತ್ತಿರುವವರನ್ನು ವಾಪಸ್ ಕಳಿಸುತ್ತಿದ್ದಾರೆ.
ಓದಿ:ನಿಮ್ಮನ್ನು ರಕ್ಷಣೆ ಮಾಡೋಕೆ ನಾವೇ ಉಳಿಯುವ ವಿಶ್ವಾಸವಿಲ್ಲ: ಆನಂದ್ ಸಿಂಗ್