ಕೊಪ್ಪಳ: ಸಚಿವ ಬಿ.ಸಿ. ಪಾಟೀಲ್ ನಗರದ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಪರಿಶೀಲಿಸಿ ತೆರಳುತ್ತಿದ್ದಂತೆ ಬೆಡ್ ಸಿಗದೇ ಪರದಾಡುತ್ತಿದ್ದ ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಚಿವರ ಮುಂದೆ ಬೆಡ್ ಕೊಡ್ತೇವೆ ಎಂದರು, ಈಗ ಕೊಡುತ್ತಿಲ್ಲ.. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಂಬಂಧಿಕರ ಆಕ್ರೋಶ
ಬೆಡ್ ಸಿಗುತ್ತಿಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಅವರ ಬಳಿ ಹೇಳಿದ್ದಾರೆ. ಆಗ ಸಚಿವರು ಬೆಡ್ ಕೊಡುವಂತೆ ಸೂಚಿಸಿದ್ದಾರೆ. ಆದರೆ, ಸಚಿವರು ಅತ್ತ ಹೋಗುತ್ತಿದ್ದಂತೆ ಇತ್ತ ಆಸ್ಪತ್ರೆಯವರು ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಸೋಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದ ಸಂಬಂಧಿಕರು ಬೆಡ್ ಸಿಗುತ್ತಿಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಅವರ ಬಳಿ ಹೇಳಿದ್ದಾರೆ. ಆಗ, ಸಚಿವರು ಬೆಡ್ ಕೊಡುವಂತೆ ಹೇಳಿದ್ದಾರೆ. ಆದರೆ, ಸಚಿವರು ಅತ್ತ ಹೋಗುತ್ತಿದ್ದಂತೆ ಇತ್ತ ಆಸ್ಪತ್ರೆಯವರು ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಸೋಂಕಿತ ಪತಿ ಕರೆತಂದಿದ್ದ ಮಹಿಳೆಯೊಬ್ಬರು ನಗರದ ನಾಲ್ಕು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಕ್ಕಿಲ್ಲ. ಇದರಿಂದಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ಕಾದು ಬೆಡ್ ಸಿಗದೇ ಪರದಾಡಿದ್ದಾರೆ. ಸಂಜೆಯ ವೇಳೆಗೆ ಸೋಂಕಿತನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿಬ್ಬಂದಿ ಕರೆದುಕೊಂಡು ಹೋದರು.