ಗಂಗಾವತಿ (ಕೊಪ್ಪಳ):ತಾಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿರುದ್ಧವೇ ಸಿಡಿದು ಬಿಜೆಪಿ ಸೇರ್ಪಡೆಯಾಗಿ ನಾಮಪತ್ರ ಸಲ್ಲಿಸಿ ಪರಾಭವಗೊಂಡಿದ್ದ ತಾಲೂಕಿನ ಢಣಾಪುರ ಕ್ಷೇತ್ರದ ಸದಸ್ಯ ಬಿ. ಫಕೀರಪ್ಪ ಇದೀಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ.
ತಾ.ಪಂ ರಿವರ್ಸ್ ಆಪರೇಷನ್, ಕಮಲ ಬಿಟ್ಟು ಯೂಟರ್ನ್ ಹೊಡೆದ ಫಕೀರಪ್ಪ
ಗಂಗಾವತಿ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆ ಆಪರೇಷನ್ ಕಮಲದ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಕಮಲ ಪಕ್ಷ ಸೇರಿದ್ದ ಬಿ.ಫಕೀರಪ್ಪ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದು, ಬಿಜೆಪಿಗೆ ಶಾಕ್ ನೀಡಿದ್ದಾರೆ.
ಗಂಗಾವತಿ: ತಾ.ಪಂ ರಿವರ್ಸ್ ಆಪರೇಷನ್, ಕಮಲ ಬಿಟ್ಟು ಯೂಟರ್ನ್ ಹೊಡೆದ ಫಕೀರಪ್ಪ
ಮಾಜಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಢಣಾಪುರ ಗ್ರಾಮಕ್ಕೆ ಭೇಟಿಕೊಟ್ಟ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಮತ್ತೆ ಪಕ್ಷಕ್ಕೆ ಆಗಮಿಸಿದ ಫಕೀರಪ್ಪ ತನಗೆ ಇಷ್ಟವಿರದಿದ್ದರೂ ಬಿಜೆಪಿಗರು ಬಲವಂತವಾಗಿ ಕರೆದೊಯ್ದಿದ್ದರು ಎಂದರು.
ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಬೆಂಬಲ ಕೊಡಿಸುವುದಾಗಿ ಆ ಪಕ್ಷದ ಮುಖಂಡರು ಒತ್ತಾಯಪೂರ್ವಕ ಕರೆದೊಯ್ದು ನಾಮಪತ್ರ ಹಾಕಿಸಿದ್ದರು ಎಂದು ಆರೋಪಿಸಿದ ಫಕೀರಪ್ಪ, ಪಕ್ಷದ ಸಿದ್ಧಾಂತ ಹಾಗೂ ಶಿವರಾಜ ತಂಗಡಗಿ ನಾಯಕತ್ವದಲ್ಲಿ ವಿಶ್ವಾಸ ಇರುವುದಾಗಿ ಇದೀಗ ವಾಪಾಸಾಗಿದ್ದಾರೆ.