ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಜಾತ್ಯಾತೀತ ಮುತ್ಸದ್ಧಿ ನಾಯಕ, ಮತ್ತೆ ಸಿಎಂ ಆದ್ರೇ ತಪ್ಪೇನಿಲ್ಲ- ಇಕ್ಬಾಲ್ ಅನ್ಸಾರಿ - ರೋಷನ್ ಬೇಗ್

ರೋಷನ್ ಬೇಗ್ ಹಿರಿಯರು. ಸಹಜವಾಗಿ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಅವರು ಮಾತನಾಡಿರೋದು ಬೆಂಗಳೂರಿಗೆ ಸಂಬಂಧಿಸಿದ ವಿಷಯ ಮತ್ತು ಅದು ವೈಯಕ್ತಿಕ ವಿಚಾರ. ರೋಷನ್ ಬೇಗ್ ಅವರ ಹೇಳಿಕೆಗೂ ಸಮಾಜಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

ಇಕ್ಬಾಲ್ ಅನ್ಸಾರಿ

By

Published : Jun 5, 2019, 4:36 PM IST

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರೋಷನ್ ಬೇಗ್ ಅವರು ಅಷ್ಟು ರೋಷಾವೇಶದಿಂದ ಮಾತನಾಡಬಾರದಿತ್ತು ಎಂದು‌ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಗಂಗಾವತಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜಾತ್ಯಾತೀತ ನಾಯಕ. ರೋಷನ್ ಬೇಗ್ ಅಷ್ಟು ರೋಷಾವೇಶದಿಂದ ಅವರ ವಿರುದ್ಧ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ರೋಷನ್ ಬೇಗ್ ಹಿರಿಯರು. ಸಹಜವಾಗಿ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಅವರು ಮಾತನಾಡಿರೋದು ಬೆಂಗಳೂರಿಗೆ ಸಂಬಂಧಿಸಿದ ವಿಷಯ ಮತ್ತು ಅದು ವೈಯಕ್ತಿಕ ವಿಚಾರ. ರೋಷನ್ ಬೇಗ್ ಅವರ ಹೇಳಿಕೆಗೂ ಸಮಾಜಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ ಸೋಲಾಗಿದ್ದು ನಿಜ. ಹಾಗಂತಾ ಸೋಲಿಗೆ ಇವರೇ ಕಾರಣ, ಅವರೇ ಕಾರಣ ಎಂದು ಮಾತನಾಡಬಾರದು ಎಂದ ಇಕ್ಬಾಲ್ ಅನ್ಸಾರಿ, ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.

ABOUT THE AUTHOR

...view details