ಗಂಗಾವತಿ:ಸಾಕು ಪ್ರಾಣಿಗಳಲ್ಲಿ ನಾಯಿ ಎಂದರೆ ಬಹುತೇಕರಿಗೆ ಅಚ್ಚುಮೆಚ್ವು. ವಿಶ್ವಾಸಕ್ಕೆ ಮತ್ತೊಂದು ಹೆಸರೇ ಈ ಪ್ರಾಣಿ. ಆದರೆ ಇಲ್ಲೊಂದು ನಾಯಿ ಸೃಷ್ಟಿಸಿದ ಅವಾಂತರಕ್ಕೆ 14 ಜನ ಗಾಯಗೊಂಡಿದ್ದಾರೆ.
ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಮುಧೋಳ ತಳಿಯ ಸಾಕುನಾಯಿಯೊಂದರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಷ್ಟೇ ಅಲ್ಲ, 14 ಜನರಿಗೆ ಗಾಯ ಹಾಗೂ 57 ಜನರ ಮೇಲೆ ದೂರಿಗೆ ಕಾರಣವಾಗಿದೆ.
ವಿವರ: ಬಂಕಾಪುರ ಗ್ರಾಮದ ಸೂಜಿ ನರಿಯಪ್ಪ ಗೊಲ್ಲರ್ ಎಂಬುವರು ಸಾಕಿದ್ದ ಮುಧೋಳ ತಳಿಯ ನಾಯಿ ಅದೇ ಗ್ರಾಮದ ಬೀರಪ್ಪ ಬುರಡಿ ಎಂಬುವರ ಜಮೀನಿಗೆ ನುಗ್ಗಿದೆ. ಇದು ಎರಡು ಕುಟುಂಬಗಳ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಮೊದಲೇ ಈ ಎರಡು ಕುಟುಂಬದ ಮಧ್ಯೆ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿತ್ತು ಎಂದು ತಿಳಿದುಬಂದಿದೆ. ಆದರೆ ನಾಯಿ ಜಮೀನಿಗೆ ನುಗ್ಗಿದ ವಿಚಾರ ಮುನ್ನೆಲೆಗೆ ಬಂದು ದೊಡ್ಡ ಗಲಾಟೆೆಯೇ ನಡೆದಿದೆ.