ಕೊಪ್ಪಳ: ಕೊರೊನಾ ಭೀತಿ ಹಿನ್ನೆಲೆ ಕೊಪ್ಪಳ ನಗರ ಸಂಪೂರ್ಣ ಲಾಕ್ ಡೌನ್ ಆಗಿದ್ದು, ನಗರಸಭೆ ಸಿಬ್ಬಂದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಕೊರೊನಾ ತಡೆಗಟ್ಟಲು ಕೊಪ್ಪಳದ ರಸ್ತೆಗಳಲ್ಲಿ ಔಷಧಿ ಸಿಂಪಡಿಸಿದ ನಗರಸಭೆ - ಕೊರೊನಾ ಭೀತಿ
ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಅಗ್ನಿಶಾಮಕದಳದ ವಾಹನಗಳು ಹಾಗೂ ನಗರಸಭೆ ಟ್ಯಾಂಕರ್ ಗಳನ್ನು ಬಳಸಿಕೊಂಡು ನಗರದಲ್ಲಿ ಕ್ಯಾಲ್ಸಿಯಂ ಹೈಡ್ರೋಕ್ಲೋರೈಡ್ ಹಾಗೂ ಕ್ಯಾಲ್ಸಿಯಂ ಹೈಪೋಕ್ಲೋರೈಡ್ ಮಿಶ್ರಣವನ್ನು ಸಿಂಪಡಣೆ ಮಾಡುತ್ತಿದ್ದಾರೆ.
ಕೊರೊನಾ ತಡೆಗಟ್ಟಲು ನಗರದಾದ್ಯಂತ ಔಷದಿ ಮಿಶ್ರಣ ಸಿಂಚಿಸಿದ ನಗರಸಭೆ
ಜಿಲ್ಲಾಡಳಿತ ಮುಂಜಾಗ್ರತೆ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಅಗ್ನಿಶಾಮಕ ದಳದ ವಾಹನಗಳು ಹಾಗೂ ನಗರಸಭೆ ಟ್ಯಾಂಕರ್ ಗಳನ್ನು ಬಳಸಿಕೊಂಡು ನಗರದಲ್ಲಿ ಕ್ಯಾಲ್ಸಿಯಂ ಹೈಡ್ರೋಕ್ಲೋರೈಡ್ ಹಾಗೂ ಕ್ಯಾಲ್ಸಿಯಂ ಹೈಪೋಕ್ಲೋರೈಡ್ ಮಿಶ್ರಣವನ್ನು ಸಿಂಪಡಣೆ ಮಾಡುತ್ತಿದ್ದಾರೆ.
ನಗರದಲ್ಲಿ ಕೆಮಿಕಲ್ಸ್ ಸಿಂಪಡಣೆ ಮಾಡುವ ಸ್ಥಳಕ್ಕೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸಿದರು.