ಕರ್ನಾಟಕ

karnataka

ETV Bharat / state

ಕಣ್ಮುಚ್ಚಿದ ಸಿಸಿ ಕ್ಯಾಮರಾಗಳು ಕಣ್ತೆರೆಯುವುದು ಯಾವಾಗ? - ಕುಷ್ಟಗಿ ಪುರಸಭೆ

ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಹಾಳಾಗಿದ್ದು, ಪುರಸಭೆ ಕ್ಯಾಮರಾಗಳ ದುರಸ್ಥಿ ಕಾರ್ಯ ಮಾಡದೇ ನಿರ್ಲಕ್ಷ್ಯವಹಿಸಿದ್ದು, ನಗರದಲ್ಲಿ ಸಿಸಿ ಕ್ಯಾಮರಾಗಳು ಇದ್ದರೂ ಇಲ್ಲದಂತಾದೆ.

Kustagi
ಕುಷ್ಟಗಿ

By

Published : Nov 3, 2020, 9:47 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ಪ್ರಮುಖ ವೃತ್ತಗಳಲ್ಲಿ ನಿಗಾವಹಿಸುವ ಹಿನ್ನೆಲೆಯಲ್ಲಿ ಕಣ್ಗಾವಲಾಗಿದ್ದ ಸಿಸಿ ಕ್ಯಾಮರಾಗಳು ಕಣ್ಮುಚ್ಚಿದ್ದು, ಪುರಸಭೆ ನಿರ್ವಹಣೆ ಇಲ್ಲದೇ ಕಣ್ತೆರೆಯುವ ಭಾಗ್ಯದಿಂದ ವಂಚಿತವಾಗಿವೆ.

ಕಳ್ಳತನ, ಅಕ್ರಮ ಚಟುವಟಿಕೆಗಳ ಚಲನ ವಲನಗಳ ಮೇಲೆ ನಿಗಾವಹಿಸಲು ಪೊಲೀಸ್​ ಇಲಾಖೆಯ ಒತ್ತಾಸೆಯ ಮೇರೆಗೆ ಪುರಸಭೆ ಹಿಂದಿನ ಆಡಳಿತ ಮಂಡಳಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿತ್ತು. ಆದರೆ ಇದೀಗ ಅವು ಕಾರ್ಯ ನಿರ್ವಹಿಸದೆ ಮೂಲೆ ಹಿಡಿದಿವೆ.

ನಗರದಲ್ಲಿ ಕಣ್ಮುಚ್ಚಿದ ಸಿಸಿ ಕ್ಯಾಮರಾಗಳು

14ನೇ ಹಣಕಾಸಿನ ಯೋಜನೆಯಲ್ಲಿ 12.50ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ವೃತ್ತ, ಪೊಲೀಸ್​ ಠಾಣೆಯ ಮುಂಭಾಗ, ಮಾರುತಿ ವೃತ್ತ, ಕನಕದಾಸ ವೃತ್ತ, ಪುರಸಭೆ ಮುಂಭಾಗ ಸೇರಿದಂತೆ 12ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಈ ಎಲ್ಲಾ ಸಿಸಿ ಕ್ಯಾಮರಾಗಳ ಸಂಪರ್ಕ ಪೊಲೀಸ್​ ಠಾಣೆಯ ಮಾನೀಟರ್​ನಲ್ಲಿ ಕೇಂದ್ರೀಕರಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳ ಕೇಬಲ್ ಅಂತರ ದೂರವಾಗಿರುವ ಹಿನ್ನೆಲೆಯಲ್ಲಿ ಲಾರಿಗಳ ಡಿಕ್ಕಿಯಿಂದ ಕೇಬಲ್ ತುಂಡಾಗಿ ಪೊಲೀಸ್​ ಠಾಣೆಯ ಸಂಪರ್ಕ ಕಳೆದುಕೊಂಡಿತ್ತು.

ಬಸವೇಶ್ವರ ವೃತ್ತ ಸಿಸಿ ಕ್ಯಾಮರಾ ವಾಹನ ಡಿಕ್ಕಿಯಿಂದ ಮುರಿದು ಬಿದ್ದಿತ್ತು. ಈ ಅವಘಡಗಳಿಂದಾಗಿ ಪುನಃ ದುರಸ್ಥಿಯಾಗಿಲ್ಲ. ಪೊಲೀಸ್​ ಠಾಣೆಯಿಂದ ಮರು ದುರಸ್ಥಿಗೆ ಮನವಿ ಸಲ್ಲಿಸಿದರೂ ಇದುವರೆವಿಗೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ನಗರದಲ್ಲಿ ಸಿಸಿ ಕ್ಯಾಮರಾಗಳು ಇದ್ದರೂ ಇಲ್ಲದಂತಾದೆ.

ABOUT THE AUTHOR

...view details