ಕರ್ನಾಟಕ

karnataka

ETV Bharat / state

ಹೆದ್ದಾರಿ ಡಾಬಾಗಳಲ್ಲಿ ಅನ್ಯ ರಾಜ್ಯದವರೊಂದಿಗೆ ಎಚ್ಚರದಿಂದ ವ್ಯವಹರಿಸಿ: ತಹಶೀಲ್ದಾರ ಸಿದ್ದೇಶ - Tahsildar M. Siddesha Statement

ಹೆದ್ದಾರಿ ಡಾಬಾಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು ರಾಜ್ಯದವರೊಂದಿಗೆ ಎಚ್ಚರದಿಂದ ವ್ಯವಹರಿಸಿ ಎಂದು ತಹಶೀಲ್ದಾರ ಎಂ.ಸಿದ್ದೇಶ ತಿಳಿಸಿದ್ದಾರೆ.

Tahsildar  Siddesh
ತಹಶೀಲ್ದಾರ್​ ಎಂ.ಸಿದ್ದೇಶ

By

Published : Jun 17, 2020, 11:12 PM IST

ಕುಷ್ಟಗಿ: ತಾಲೂಕಿನ ಹೆದ್ದಾರಿ ಡಾಬಾಗಳಲ್ಲಿ ಮಹಾರಾಷ್ಟ್ರ ವಾಹನಗಳ ಚಾಲಕರಿಗೆ ಸ್ನಾನ, ಶೌಚ ಊಟಕ್ಕೆ ಬಹಳ ಹೊತ್ತು ನಿಲ್ಲಿಸಲು ಅವಕಾಶ ನೀಡದಿರಲು ಹಾಗೂ ಎಚ್ಚರಿಕೆಯಿಂದ ವ್ಯವಹರಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ ಎಂ.ಸಿದ್ದೇಶ ತಿಳಿಸಿದ್ದಾರೆ.

ತಹಶೀಲ್ದಾರ್​ ಎಂ.ಸಿದ್ದೇಶ

ಈ ಬಗ್ಗೆ ಈ ಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕುಷ್ಟಗಿ ತಾಲೂಕು ಸದ್ಯ ಕೊರೊನಾ ಸೋಂಕಿನಿಂದ ಮುಕ್ತವಾಗಿದೆ. ಆದರೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಕೊರೊನಾ ಭಯ ಶುರುವಾಗಿದೆ. ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಂಕಿತ ರಾಜ್ಯಗಳ ವಾಹನಗಳು ಸಂಚರಿಸುತ್ತಿವೆ. ಇತ್ತೀಚೆಗೆ ಹೆದ್ದಾರಿ ಬದಿಯ ಡಾಬಾಗಳು ಶುರುವಾಗಿವೆ. ಅಲ್ಲದೇ ಸಣ್ಣ ಪುಟ್ಟ ಚಹಾ ಹಾಗೂ ಪಾನ ಶಾಪ್​ಗಳಿವೆ. ಹೈರಿಸ್ಕ ಎಂದೇ ಘೋಷಣೆಯಾಗಿರುವ ಸೋಂಕಿತ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಮದ್ಯಪ್ರದೇಶ, ದೆಹಲಿ ವಾಹನಗಳು ಸಂಚರಿಸುತ್ತಿವೆ. ಈ ವಾಹನಗಳ ಚಾಲಕರು, ಪ್ರಯಾಣಿಕರು ಊಟ, ಉಪಹಾರಕ್ಕಾಗಿ, ಸ್ನಾನ, ಶೌಚಕ್ಕೆ ಇಲ್ಲಿನ ಡಾಬಾಗಳ ಮುಂದೆ ವಾಹನಗಳನ್ನು ಗಂಟೆಗಟ್ಟಲೇ ನಿಲ್ಲಿಸುತ್ತಿದ್ದಾರೆ. ಇದರಿಂದ ಕೊರೊನಾ ಹರಡುವ ಆತಂಕ ಎದುರಾಗಿದೆ.

ಹಾಗಾಗಿ ಕುಷ್ಟಗಿ ಹೆದ್ದಾರಿ ಮೇಲ್ಸೇತುವೆ ಹೆದ್ದಾರಿ ಡಾಬಾಗಳಲ್ಲಿ ಮಹಾರಾಷ್ಟ್ರ ವಾಹನಗಳ ಚಾಲಕರಿಗೆ ಸ್ನಾನ, ಶೌಚ ಊಟಕ್ಕಾ ಬಹಳ ಹೊತ್ತು ನಿಲ್ಲಿಸಲು ಅವಕಾಶ ನೀಡದಿರಲು ಹಾಗೂ ಎಚ್ಚರಿಕೆಯಿಂದ ವ್ಹವಹರಿಸಲು ಸೂಚಿಸಲಾಗಿದೆ. ಅಲ್ಲದೇ ಅವರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಲು ಮೌಖಿಕವಾಗಿ ಸೂಚಿಸಲಾಗಿದ್ದು, ಊಟ ಉಪಹಾರವನ್ನು ಪಾರ್ಸೆಲ್​ ನೀಡಲು ಸೂಚಿಸಲಾಗಿದೆ ಎಂದರು.

ABOUT THE AUTHOR

...view details