ಕುಷ್ಟಗಿ/ಕೊಪ್ಪಳ: ರಸಗೊಬ್ಬರ ಮಾರಾಟ ನಿಯಮಾವಳಿ ಉಲ್ಲಂಘಿಸಿದ ಹಿನ್ನೆಲೆ ಕುಷ್ಟಗಿಯ ಬಸವೇಶ್ವರ ವೃತ್ತದ ರಸಗೊಬ್ಬರ ಮಾರಾಟಗಾರರಾದ ಮೆಸರ್ಸ್ ಪಿ.ಎ. ಕಾಳಗಿಯವರ ಮಾರಾಟ ಪರವಾನಿಗೆಯನ್ನು 20 ದಿನ ರದ್ದು ಮಾಡಲಾಗಿದೆ.
ರಸಗೊಬ್ಬರ ಮಾರಾಟ ನಿಯಮಾವಳಿ ಉಲ್ಲಂಘಿಸಿದ ಅಂಗಡಿ ಪರವಾನಿಗೆ ರದ್ದು - Cancellation of store license in violation of fertilizer sale regulations
ರಸಗೊಬ್ಬರ ಮಾರಾಟ ನಿಯಮಾವಳಿ ಉಲ್ಲಂಘಿಸಿದ ಆರೋಪದಡಿ ಅಂಗಡಿ ಪರವಾನಿಗೆಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ರದ್ದು ಮಾಡಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ರಸಗೊಬ್ಬರ ಮಾರಾಟ ನಿಯಮಾವಳಿ ಉಲ್ಲಂಘಿಸಿದ ಅಂಗಡಿ ಪರವಾನಿಗೆ ರದ್ದು
ಕಳೆದ ಸೋಮವಾರ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ಮೆಸರ್ಸ್ ಪಿ.ಎ.ಕಾಳಗಿ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆ ರಸ ಗೊಬ್ಬರ (ನಿಯಂತ್ರಣ) ಆದೇಶ 1985 ನಿಯಮದನ್ವಯ 20 ದಿನಗಳ ಮಾರಾಟದ ಪರವಾನಿಗೆ ಅಮಾನತಿನ ನೋಟಿಸ್ ಜಾರಿ ಮಾಡಲಾಗಿದೆ.
ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಮಾಹಿತಿ ನೀಡಿದ್ದಾರೆ.